ವಂಶಪಾರಂಪರ್ಯರಾಗಿ ತಿರುಮಲ ತಿಮ್ಮಪ್ಪನ ಸೇವೆ ಮಾಡುತ್ತಿರುವ ತಿರುಪತಿಯ ಗೌರವ ಅರ್ಚಕ ರಮಣ ದೀಕ್ಷಿತಲುರನ್ನು ವಯೋಮಿತಿ ಆಧಾರದಲ್ಲಿ ಪ್ರಮುಖ ಹುದ್ದೆಯಿಂದ ಟಿಟಿಡಿ ವಜಾಗೊಳಿಸಿದೆ. ದೇವಾಲಯದ ಗುತ್ತಿಗೆ ನೌಕರರ ವೇತನವನ್ನು 3000 ರೂಪಾಯಿಯಿಂದ 20,000 ರೂಪಾಯಿಗೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಸೋಮವಾರ ಅನ್ನಮಯ್ಯ ಭವನದಲ್ಲಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಹಾಗೂ ಟಿಟಿಡಿ ಅಧಿಕಾರಿಗಳ ವಿರುದ್ಧ ಭಾರೀ ಟೀಕೆ ಮಾಡುತ್ತಿದ್ದ ಗೌರವ ಪ್ರಧಾನ ಅರ್ಚಕ ಎ.ವಿ. ರಮಣ ದೀಕ್ಷಿತುಲು ಅವರನ್ನು ವಯೋಮಿತಿ ಆಧಾರದಲ್ಲಿ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಟಿಟಿಡಿ ಅಧಿಕಾರಿಗಳ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಟೀಕೆಗಳ ಬಗ್ಗೆ ಟಿಟಿಡಿ ಸದಸ್ಯರು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಂಡಳಿಯ ಸದಸ್ಯರು ಸರ್ವಾನುಮತದಿಂದ ಎ.ವಿ.ರಮಣ ದೀಕ್ಷಿತುಲು ಅವರನ್ನು ಗೌರವ ಅರ್ಚಕ ಸ್ಥಾನದಿಂದ ಪದಚ್ಯುತಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಎ.ವಿ.ರಮಣ ದೀಕ್ಷಿತುಲುರನ್ನು ಹುದ್ದೆಯಿಂದ ತೆಗೆದುಹಾಕಲು ಎಲ್ಲರೂ ಒಪ್ಪಿಕೊಂಡಿದ್ದಾರೆಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ತಿಳಿಸಿದ್ದಾರೆ. ಎ.ವಿ.ರಮಣ ದೀಕ್ಷಿತುಲು ತಿರುಮಲ ದೇಗುಲದಲ್ಲಿ ವಂಶಪಾರಂಪರ್ಯವಾಗಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದವರು.
ಎರಡು ತೆಲುಗು ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಚಿರಪರಿಚಿತ ವ್ಯಕ್ತಿ.ತಿಮ್ಮಪ್ಪನ ಸೇವೆಯಲ್ಲಿ ನಿರತರಾಗಿದ್ದ ಎ.ವಿ.ರಮಣ ದೀಕ್ಷಿತುಲು ಅವರನ್ನು ಹುದ್ದೆಯಿಂದ ತೆಗೆದು ಹಾಕಿರುವ ನಿರ್ಣಯಕ್ಕೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಇದರಿಂದ ಟಿಟಿಡಿ ಮತ್ತು ಎಪಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವಿವಾದಗಳಿಗೆ ಕೇಂದ್ರಬಿಂದುವಾಗಿದೆ. ಮೇ 15, 2018 ರಂದು ಚೆನ್ನೈನಲ್ಲಿ ಟಿಟಿಡಿ ಮುಖ್ಯ ಅರ್ಚಕರ ಸಮ್ಮುಖದಲ್ಲಿ ತಮ್ಮ ಆರೋಪಗಳ ಮೂಲಕ ರಾಷ್ಟ್ರದ ಗಮನ ಸೆಳೆದರು.
ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಅವರೊಂದಿಗೆ ಅವರು ಕೆಲವು ವ್ಯಕ್ತಿಗಳೊಂದಿಗೆ ಸಂಭಾಷಣೆ ನಡೆಸಿದ್ದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 15,000 ಟಿಟಿಡಿ ಗುತ್ತಿಗೆ ನೌಕರರು ಮತ್ತು ಸೊಸೈಟಿ ನೌಕರರಿಗೆ 3,000 ರೂ.ನಿಂದ 20,000 ರೂ.ವರೆಗೆ ವೇತನ ಹೆಚ್ಚಳ ಮಾಡಲು ಟಿಟಿಡಿ ನಿರ್ಧರಿಸಿದೆ.
ತಿರುಮಲದಲ್ಲಿ ಹೊರಗುತ್ತಿಗೆ ಮತ್ತು ಗುತ್ತಿಗೆ ನೌಕರರಿಗೆ ಸಬ್ಸಿಡಿಯಲ್ಲಿ ಉಪಹಾರ, ಊಟ, ಚಹಾ ಮತ್ತು ಕಾಫಿ ಸೇರಿದಂತೆ ಹಲವು ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.1.69 ಕೋಟಿ ರೂಪಾಯಿ ವೆಚ್ಚದಲ್ಲಿ ಮುಖ್ಯ ದೇವಸ್ಥಾನದ ಜಯ ಮತ್ತು ವಿಜಯ ಮೂರ್ತಿಗಳಿಗೆ ಚಿನ್ನದ ಲೇಪನಕ್ಕೆ ಅನುಮೋದನೆ, ಪ್ರತಿ ವರ್ಷ ಫೆಬ್ರವರಿ 24ರಂದು ತಿರುಪತಿ ಸಂಸ್ಥಾಪನಾ ದಿನಾಚರಣೆ, 3.11 ಕೋಟಿ ರೂಪಾಯಿ ತಿರುಮಲದ ಸಪ್ತಗಿರಿ ಚೌಲ್ಟ್ರಿಯ 1 ಮತ್ತು 4ನೇ ಬ್ಲಾಕ್ಗಳಲ್ಲಿ ಕೊಠಡಿಗಳ ಆಧುನೀಕರಣ, ತಿರುಚಾನೂರಿನ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ದೀಪಾಲಂಕಾರಕ್ಕೆ 3 ಕೋಟಿ ಅನುದಾನ ನೀಡಲು ತೀರ್ಮಾನಿಸಲಾಗಿದೆ.
ಶ್ರೀಲಂಕಾದ ಕೊಲಂಬೊದಲ್ಲಿ ಭಗವಾನ್ ಬಾಲಾಜಿ ದೇವಾಲಯವನ್ನು ನಿರ್ಮಿಸಲು ಯೋಜನೆ ಮತ್ತು ತಿರುಮಲಕ್ಕೆ ನಡಿಗೆ ಮಾರ್ಗದಲ್ಲಿ ಗಾಳಿ ಗೋಪುರ, ಹನುಮಾನ್ ಪ್ರತಿಮೆ ಮತ್ತು ಮೊಣಕಾಲು ಮೆಟ್ಟಿಲುಗಳಲ್ಲಿ ಭಗವಾನ್ ಬಾಲಾಜಿಯ ನಿರಂತರ ಪಠಣೆ ಮಾಡಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.