ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿಕೆಗೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಪರ-ವಿರೋಧಗಳು ವ್ಯಕ್ತವಾಗುತ್ತಿದೆ.
ಈ ಮಧ್ಯೆ ಟಿಪ್ಪುವನ್ನು KRSಗೆ ಅಡಿಪಾಯ ಎಂದು ಹೇಳಬಹುದು ಎಂದು ನಟ ಚೇತನ್ ಅಹಿಂಸಾ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹತಿ ಹಂಚಿಕೊಂಡಿರುವ ಅವರು ಮೈಸೂರು ಮೂಲದ ಟಿಪ್ಪು ವಿದ್ವಾಂಸ ಪ್ರೊ. ಗುರುಸಿದ್ದಯ್ಯ ಅವರ ಪ್ರಕಾರ, ಶಾಸನಗಳ ಆಧಾರದಲ್ಲಿ ಟಿಪ್ಪು ಸುಲ್ತಾನ್ ಇವತ್ತಿನ KRS ಅಣೆಕಟ್ಟು ಇರುವ ಸ್ಥಳದ ಬಳಿ ಅಣೆಕಟ್ಟೆ ಕಟ್ಟುವ ಉದ್ದೇಶ ಹೊಂದಿದ್ದರು ಎಂಬು ಗೊತ್ತಾಗುತ್ತದೆ.
ಟಿಪ್ಪು ಯಾವುದೇ ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸದಿದ್ದರೂ, ಇವತ್ತಿನ ಅಣೆಕಟ್ಟು ಅದೇ ಸುತ್ತಮುತ್ತಲ ಸ್ಥಳದಲ್ಲಿ ನಿರ್ಮಾಣವಾಗಿರುವುದರಿಂದ ಅವರನ್ನೂ ಕೆಆರ್ಎಸ್ಗೆ ಆಧಾರ ಶಿಲೆ ಎನ್ನಬಹುದು ಎಂದು ಬರೆದುಕೊಂಡಿದ್ದಾರೆ.