Tuesday, January 27, 2026
26.9 C
Bengaluru
Google search engine
LIVE
ಮನೆರಾಜ್ಯವಕ್ಫ್ ಬಿಲ್​ ವಿರೋಧಿಸುವವರು ದೇಶದ್ರೋಹಿಗಳು- ಪ್ರಮೋದ ಮುತಾಲಿಕ್

ವಕ್ಫ್ ಬಿಲ್​ ವಿರೋಧಿಸುವವರು ದೇಶದ್ರೋಹಿಗಳು- ಪ್ರಮೋದ ಮುತಾಲಿಕ್

ಹುಬ್ಬಳ್ಳಿ: ಸಂಸತ್ತಿನಲ್ಲಿ ಐತಿಹಾಸಿಕ ವಕ್ಪ್ ಬಿಲ್ ಮಂಡನೆ ಮಾಡಿ ಅವತೇ ರಾತ್ರಿ ಬಿಲ್ ಪಾಸ್ ಆಗಿದ್ದು ಸ್ವಾಗತಾರ್ಹ. ವಕ್ಪ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠಮಾನ್ಯಗಳ , ದಲಿತರ ಜಾಗ, ಎಂಎಲ್ ಎ , ಎಂಪಿಗಳ ಜಾಗವನ್ನು ಅತಿಕ್ರಮಣ ಮಾಡಿ ವಕ್ಪ್ ಬೋರ್ಡ್ ಲೂಟಿ ಮಾಡುತ್ತಿತ್ತು. ಇಂತಹ ವಿರುದ್ಧ ಬಿಲ್ ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದ ಕೀಮ್ಸ್ ಆಸ್ಪತ್ರೆಗೆ ಭೇಟಿ‌ ನೀಡಿ, ಆತ್ಮಹತ್ಯೆಗೆ ಯತ್ನಿಸಿದ ಯುವತಿ ಕುಟುಂಬಕ್ಕೆ ಧೈರ್ಯ ತುಂಬಿ‌ ಮಾತನಾಡಿದ ಅವರು, ವಕ್ಪ್ ಬಿಲ್ ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು.

ಬರೀ ಓಟ್ ಬ್ಯಾಂಕ್, ಅಧಿಕಾರ ಒಂದೇ ಅಲ್ಲ. ದೇಶ, ಜನ ಇದ್ದಾರೆ. ಆದರೆ ನೀವು ಲೂಟಿಕೋರರ ಪರವಾಗಿ ನಿಲ್ಲುತ್ತಾರೆ. ಕನಿಷ್ಠ ಪ್ರಜ್ಞೆ ಇಲ್ಲ, ಸಂವಿಧಾನದ ಮೀರಿ ಕಾಂಗ್ರೆಸ್ ಕಾನೂನು ತಂದಿದೆ ಅವರಿಗೆ ನಾಚಿಕೆ ಆಗಬೇಕು. ಸಂವಿಧಾನದ ಧಿಕ್ಕರಿಸಿ ವಕ್ಪ್ ಬೋರ್ಡ್ ಗೆ ಪವರ್ ನೀಡಿದ್ದರು. ಕಾಂಗ್ರೆಸ್ ನವರು ನೀತಿಗೆಟ್ಟವರು, ನೀಚ ಕಾಂಗ್ರೆಸ್ ಗರು, ವಕ್ಪ್ ಬೋರ್ಡ್ ನನ್ನು ಕೆಲ ಮೌಲ್ವಿಗಳು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದರು. ಮಲ್ಲಿಕಾರ್ಜುನ ಖರ್ಗೆ ವಕ್ಪ್ ಬೋರ್ಡ್ ಹೆಸರಿನಲ್ಲಿ ನೂರಾರು ಎಕರೆ ಲೂಟಿ ಮಾಡಿರುವ ಆರೋಪ ಹೊರಬಂದಿದೆ. ಅನ್ವರ್ ಮಾನ್ಪಡಿ ವರದಿಯಲ್ಲಿ ದಾಖಲೆ ಸಮೇತ ಇದೆ ಇದಕ್ಕೆಲ್ಲಾ ಕರ್ನಾಟಕ ಬಿಜೆಪಿ ಕಾರಣ, ಕರ್ನಾಟಕ ಬಿಜೆಪಿಯವರು ಅನ್ವರ್ ಮಾನ್ಪಡಿ ವರದಿಯನ್ನು ತಮ್ಮ ಕುರ್ಚಿ ಬುಡದಲ್ಲಿ ಇಟ್ಟುಕೊಂಡು ಈಗ ವಕ್ಪ್ ಬೋರ್ಡ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ಬಿಜೆಪಿಗೆ ನಾಚಿಕೆ ಆಗಬೇಕು. ಎಷ್ಟು ರೀತಿಯ ಡಿಲಿಂಗ್ , ವ್ಯವಹಾರ ಆಗಿದೆ. ಕರ್ನಾಟಕ ಬಿಜೆಪಿಗೆ ವಕ್ಪ್ ಬೋರ್ಡ್ ಬಿಲ್ ಬಗ್ಗೆ ಮಾತನಾಡಬೇಡಿ. ಓವೈಸಿ ಮತ್ತು ಮುಸ್ಲಿಂ ಎಂಪಿಕ್ಕಿಂತ ಹಿಂದೂ ಎಂಪಿಗಳು‌ ವಿರೋಧ ಮಾಡಿದರು.‌ ಇವರಿಗೆ ಮಾನ, ಮರ್ಯಾದೆ ಇದೆಯಾ? , ವಕ್ಪ್ ಬೋರ್ಡ್ ಮುಂದೆ ನಿಮ್ಮ ಆಸ್ತಿ ಕಬಳಿಸಿದಾಗ ನೀವು ಸತ್ತೋಗಿರುತ್ತಿರಿ.. ಮೋದಿಯವರು ತೆಗೆದುಕೊಂಡ ಕ್ರಮ ಅತ್ಯಂತ ಶ್ರೇಷ್ಠವಾಗಿದೆ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments