ಚಿಕ್ಕಬಳ್ಳಾಪುರ: ಅವರಿಬ್ಬರು ಪ್ರೀತಿ ಅಮರ, ಮದುರ, ಪ್ರೇಮ ಎಂದು 6 ವರ್ಷಗಳು ಸುತ್ತಾಡಿದ್ರು. ಆದ್ರೆ ಮದುವೆ ಎಂಬ ಕೂಗು ಕೇಳುತ್ತಿದಂತೆ ಪೋಷಕರು ಬಿಲ್ ಕುಲ್ ವಿರೋಧ ವ್ಯಕ್ತಪಡಿಸಿದ್ರು, ಇದೆಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಅಮರ ಪ್ರೇಮಿಗಳು ಪೊಲೀಸರ ಮೊರೆ ಹೋಗಿ ಸಾಂಪ್ರದಾಯದಂತೆ ಮದುವೆ ಆಗಿ ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶಿಡ್ಲಘಟ್ಟ ನಗರ ಪೋಲಿಸ್ ಠಾಣೆಯ ಮುಂದೆ ಪೊಲೀಸರೇ ನಿಂತು ಪ್ರೇಮಿಗಳ ಮದುವೆ ಮಾಡಿಸಿದ್ದಾರೆ. ಕಾರ್ತಿಕ್ ಹಾಗೂ ಅಂಕಿತ ಮುದುವೆ ಆದವರು. ಸುಮಾರು ಆರು ವರ್ಷಗಳಿಂದ ಓದುವ ಸಂದರ್ಭದಲ್ಲಿ ಪ್ರೀತಿ ಮಾಡುತ್ತಿದ್ದರು. ಅಂತರ್ ಜಾತಿಯಾದ ಕಾರಣ ಮನೆಯಲ್ಲಿ ಒಪ್ಪಲಿಲ್ಲವೆಂದು ಇಬ್ಬರು ಪೋಲಿಸ್ರ ಮೊರೆ ಹೋಗಿದ್ದಾರೆ. ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್ ಅವರಿಗೆ ತಿಳಿಸಿ ಅವರ ನೇತೃತ್ವದಲ್ಲಿ ಹಿಂದೂ ಸಂಪ್ರದಾಯದಂತೆ ಪೋಲಿಸ್ ಠಾಣೆಯಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ.


