ರಾಜಕೀಯರಾಜ್ಯ

ಡಿಕೆಶಿ ಕೆಂಪೇಗೌಡ್ರು ಕಟ್ಟಿದ ಬೆಂಗಳೂರನ್ನು ಛಿದ್ರ ಛಿದ್ರ ಮಾಡ್ತಿದ್ದಾರೆ; ಆರ್ ಅಶೋಕ್ ಆರೋಪ

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಡಿ.ಕೆ.ಶಿವಕುಮಾರ್ ಅವರ ತಂದೆ ಕೆಂಪೇಗೌಡ, ಅವರ ತಂದೆಯ ಬಗ್ಗೆ ನಾನು ತಿಳಿದಿದ್ದೇನೆ. ಅಂತವರ ಮಗನಾಗಿ ಡಿಕೆಶಿ ಕೆಂಪೇಗೌಡ ಕಟ್ಟಿದ ನಾಡನ್ನು ಛಿದ್ರ ಛಿದ್ರವಾಗಿ ಮಾಡ್ತಿದ್ದಾರೆ. ಎಂಥಾ ದುರ್ದೈವ ಬಂದು ಬಿಡ್ತು ನಮಗೆ ಎಂದು ಆರ್ ಅಶೋಲ್ ಕಿಡಿಕಾರಿದ್ದಾರೆ.

ಕೆಂಪೇಗೌಡ್ರು ನಾಲ್ಕು ಗೋಪುರಗಳನ್ನು ಕಟ್ಟಿದ್ರು, 36 ಪೇಟೆಗಳನ್ನು ಮಾಡಿದ್ರು, ಅವರ ಉದ್ದೇಶ ಬೆಂಗಳೂರು ಒಟ್ಟಾಗಿ ಇರಬೇಕೆಂದು. ಆದರೆ ಅದಕ್ಕೆ ಇವತ್ತು ಕೊಡಲಿ ಪೆಟ್ಟು ಕೊಟ್ಟಿದ್ದಾರೆ. ಹಿಂದೆ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮಾಡಿದ್ವಿ. ಕನ್ನಡಿಗರ ಸಂಖ್ಯೆ ಕಡಿಮೆ ಆದಾಗ ಎಲ್ಲಿ ಕೇಂದ್ರಾಡಳಿತ ಪ್ರದೇಶ ಆಗುತ್ತೋ ಅಂತಾ ಹಳ್ಳಿಗಳನ್ನು ಸೇರಿಸಿದ್ವಿ, ಯಾವ ಯಾವುದೋ ಕಾರಣಕ್ಕೂ ಊರು ಬಿಟ್ಟು ಹೊರಗಡೆ ಹೋಗ್ತಿದ್ದಾರೆ. ಆದರೆ ಇವತ್ತು ಭಾಗ ಮಾಡೋಕೆ ಹೊರಟಿದ್ದೀರಲ್ಲ, ಈಸ್ಟ್ ನಲ್ಲಿ ಕನ್ನಡ ಹೇಗೆ ಉಳಿಯುತ್ತೆ? ಎಂದು ಪ್ರಶ್ನಿಸಿದರು.

Comments (0)

Your email address will not be published. Required fields are marked *

Back to top button