ಕೊಪ್ಪಳ: ನವೆಂಬರ್ ಕ್ರಾಂತಿಯ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.. ರಾಜ್ಯದಲ್ಲಿ ಯಾವುದೇ ಕ್ರಾಂತಿಯಿಲ್ಲ, ಭ್ರಾಂತಿಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..
ಕೊಪ್ಪಳದಲ್ಲಿ ಮಾತನಾಡಿದ ಅವರು, ಜಾತಿ ಸಮೀಕ್ಷೆಯಲ್ಲಿ ಯಾರನ್ನೂ ತುಳಿಯುತ್ತಿಲ್ಲ. ರಾಜ್ಯದಲ್ಲಿ ಸಮಾಜಿಕ, ಆರ್ಥಿಕ ಗಣತಿ ಆಗಬೇಕಿದೆ. ಈ ಸಮೀಕ್ಷೆ ಮಾಡದೇ ಹೋದರೆ ನಮಗೆ ಯಾವ ದತ್ತಾಂಶ ಸಿಗಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಜನರಿಗೆ ಉದ್ಯೋಗ ಸಿಕ್ಕಿದೆಯಾ? ಶಿಕ್ಷಣ ದೊರೆತಿದೆಯಾ? ಎನ್ನುವುದನ್ನ ನಾವು ತಿಳಿಯಬೇಕಿದೆ.
ಇದನ್ನೆಲ್ಲಾ ಹೇಗೆ ತಿಳಿಯುವುದು. ಸಮೀಕ್ಷೆ ಮಾಡುವುದರಿಂದ ಈ ದತ್ತಾಂಶ ನಮಗೆ ಸಿಗಲಿದೆ. ರಾಜ್ಯದ ಸಮಾಜಿಕ ಹಾಗೂ ಆರ್ಥಿಕ ಸ್ಥಿತಿ ಗತಿಗಳ ಅಂಕಿ ಅಂಶ ನಮಗೆ ಬೇಕಾಗಿದೆ. ನಾವು ಯಾವುದೇ ಜಾತಿಯನ್ನು ತುಳಿಯುವ ಪ್ರಶ್ನೆಯೇ ಇಲ್ಲ. ಸಮಾಜ ಸಮಾಜ ನಿರ್ಮಾಣ ನಮ್ಮ ಕೆಲಸ. ಆದರೆ ಸಮ ಸಮಾಜ ವಿರೋಧ ಮಾಡುವವರು ಈ ಸಮೀಕ್ಷೆ ವಿರೋಧ ಮಾಡುತ್ತಿದ್ದಾರೆ ಎಂದರು.
ಸಮೀಕ್ಷೆ ನಾಳೆ ಸಂಜೆ ವರೆಗೂ ಏನಾಗಲಿದೆ ಏಷ್ಟಾಗಲಿದೆ ಎನ್ನುವುದು ನೋಡೋಣ. ಈಗಾಗಲೇ 1.10 ಕೋಟಿ ಸಮೀಕ್ಷೆ ಮುಗಿದಿದೆ. ಇನ್ನು ಎರಡು ದಿನದಲ್ಲಿ ಸಮೀಕ್ಷೆ ಮುಗಿಯುವ ವಿಶ್ವಾಸ ಇದೆ. ಸಮೀಕ್ಷೆ ಕಾದು ನೋಡೋಣ. ಕೊಪ್ಪಳ ಜಿಲ್ಲೆಯ ಸಮೀಕ್ಷೆ ಶೇ.97 ರಷ್ಟು ಮುಗಿದಿದೆ. ರಾಜ್ಯದಲ್ಲಿ ಬದಲಾವಣೆ ಬಯಸದವರು ಈ ಸಮೀಕ್ಷೆ ವಿರೋಧ ಮಾಡುತ್ತಿದ್ದಾರೆ ಎಂದರು.


