Top Newsರಾಜಕೀಯರಾಜ್ಯ

ಭಾರತೀಯ ಸಂಸ್ಕೃತಿಯನ್ನುಉಳಿಸುವ ಅನೇಕ ರಾಜಕಾರಣಿಗಳು ದೇಶದಲ್ಲಿದ್ದಾರೆ, ಅವರಲ್ಲಿ ಡಿಕೆಶಿ ಒಬ್ಬರು; ಕೆಎಸ್ಈ

ಹುಬ್ಬಳ್ಳಿ: ಡಿಕೆ ಶಿವಕುಮಾರ್ ಕುಂಭಮೇಳಕ್ಕೆ ಹೋಗ್ತಾರೆ, ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಅವರು ಹಿಂದೂ ಧರ್ಮದ ಪೂಜೆ ಮಾಡ್ತಾರೆ. ಅಂತೆಯೆ ಸಿಎಂ ಸಿದ್ದರಾಮಯ್ಯ ಅವರಿಗೂ ಒಳ್ಳೆಯ ಬುದ್ದಿ ಬರಲಿ ಅಂತ ಮಾಜಿ ಸಚಿವ ಕೆ.ಎಸ್,ಈಶ್ವರಪ್ಪ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ ಬಿಜೆಪಿಯ ಸೊತ್ತಲ್ಲ. ಬೇರೆ ಬೇರೆ ಪಕ್ಷಗಳ ಅನೇಕ ನಾಯಕರು ಭಾರತೀಯ ಸಂಸ್ಕೃತಿಯನ್ನು ಕಾಪಾಡ್ತಿದ್ದಾರೆ. ಅವರಲ್ಲೊಬ್ಬರು ಡಿಕೆ ಶಿವಕುಮಾರ್ ಎಂದು ಹೇಳಿದರು. ಮುಂದುವರಿದು ಗಾಂಧಿಯ ಬಗ್ಗೆ ಮಾತನಾಡಿ, ಅವರು ಸಾಯುವಾಗ ಹೇ ರಾಮ್ ಎಂದು ಚೀತ್ಕರಿಸಿದರು, ಅವರ ಸಮಾಧಿ ಮೇಲೆ ಹೇ ಅಲ್ಲಾಹ್ ಅಥವಾ ಹೇ ಏಸು ಅಂತ ಬರೆದಿಲ್ಲ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೋದೇ ಹಿಂದೂ ಧರ್ಮ, ಹಿಂದೂಗಳು ಯಾವ ದೇವರಿಗೆ ನಮಸ್ಕರಿಸಿದರೂ ಅದು ಸಲ್ಲೋದು ಒಬ್ಬನಿಗೆ ಮಾತ್ರ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

Comments (0)

Your email address will not be published. Required fields are marked *

Back to top button