ಇಂಫಾಲ: ಹಿಂದೂಗಳಿಲ್ಲದೆ ಜಗತ್ತು ಅಸ್ತಿತ್ವದಲ್ಲಿಲ್ಲ ಎಂದು ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಮಣಿಪುರದ ಇಂಫಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಿಸ್, ಮತ್ತು ಈಜಿಪ್ಟ್ ಮತ್ತು ರೋಮ್ನಂತಹ ಮಹಾನ್ ನಾಗರಿಕತೆಗಳು ಕಣ್ಮರೆಯಾಗಿವೆ.
ಆದರೆ ಭಾರತವು ಅಮರವಾಗಿ ಉಳಿದಿದೆ ಎಂದು ಹೇಳಿದ್ದಾರೆ.. ಭಾರತ ಎಂಬುದು ಅಮರ ನಾಗರಿಕತೆಯ ಹೆಸರು…ನಮ್ಮ ಸಮಾಜದಲ್ಲಿ ನಾವು ಒಂದು ಜಾಲವನ್ನು ಸೃಷ್ಟಿಸಿದ್ದೇವೆ, ಅದರಿಂದಾಗಿ ಹಿಂದೂ ಸಮುದಾಯ ಯಾವಾಗಲೂ ಇರುತ್ತದೆ ಎಂದರು.
ಅವರು ಸಾಮಾಜಿಕ ಏಕತೆಗೆ ಕರೆ ನೀಡಿದರು ಮತ್ತು ಸಮಾಜವನ್ನು ಬಲಪಡಿಸಲು ತಮ್ಮ ಸಂಘಟನೆ ಸಂಪೂರ್ಣವಾಗಿ ಸಮರ್ಪಿತವಾಗಿದೆ ಎಂದು ಪುನರುಚ್ಚರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾರ ವಿರುದ್ಧವೂ ಅಲ್ಲ. ಅದು ಸಮಾಜವನ್ನು ನಾಶಮಾಡಲು ಅಲ್ಲ, ಅದನ್ನು ಶ್ರೀಮಂತಗೊಳಿಸಲು ರೂಪುಗೊಂಡಿದೆ ಎಂದು ಹೇಳಿದರು.


