ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಬಸ್, ಮೆಟ್ರೋ, ದರ ಏರಿಕೆ ಮಾಡಿದ್ದು, ನಾಳೆಯಿಂದ ಜನ ಸಾಮಾನ್ಯರಿಗೆ ಹಾಲಿನ ದರ ಏರಿಕೆಯ ಬರೆ ಬೀಳಲಿದೆ. ಈಗಾಗಲೇ ಬೆರೆ ಏರಿಕೆಯಿಂದ ತತ್ತರಿಸಿದ ಜನತೆಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಚಿವ ಸಂಪುಟದಲ್ಲಿ ಹಾಲಿನ ದರ ಏರಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ನಾಳೆಯಿಂದ ಪ್ರತಿ ಲೀಟರ್ ಹಾಲಿನ ಬೆಲೆ 4 ರೂ ಹೆಚ್ಚಲಿದೆ. ಹಾಲು ತರೋಕೆ ಮುನ್ನ ಹೆಚ್ಚು ಹಣ ತೆಗೆದುಕೊಂಡು ಹೋಗಬೇಕಿದೆ.
ಬಸ್, ಮೆಟ್ರೋ, ವಿದ್ಯುತ್ ಬಳಿಕ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ದೊಡ್ಡ ಹೊರೆಯಾಗಿದೆ. ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 4ರೂ. ಹೆಚ್ಚಳ ಮಾಡಲಾಗಿದೆ. ರೈತರಿಗೆ ಇದ್ರಿಂದ ಅನುಕೂಲ ಆದ್ರೂ ಗ್ರಾಹಕರಿಗೆ ಇದೊಂದು ಬರೆ ಅಂತ ಜನರ ಆಕ್ರೋಶ ಹೊರಹಾಕಿದ್ದಾರೆ.
ಟೋನ್ಡ್ ಹಾಲು ಅರ್ಧ ಲೀಟರ್ ₹24, ಹೊಸ ದರ 26 ರೂ
ಟೋನ್ಡ್ ಹಾಲು ಒಂದು ಲೀಟರ್ ₹44, ಹೊಸ 48 ರೂ
ಹೋಮೋಜಿನೆಸ್ಟ್ ಟೋನ್ಡ್ ಹಾಲು ಅರ್ಧ ಲೀಟರ್ ₹24, ಹೊಸ ದರ 26
ಹೋಮೋಜಿನೆಸ್ಟ್ ಟೋನ್ಡ್ ಹಾಲು ಒಂದು ಲೀಟರ್ ₹45, ಹೊಸ ದರ ದರ 49ರೂ
ಹೋಮೋಜಿನೆಸ್ಟ್ ಹಸುವಿನ ಹಾಲು ಅರ್ಧ ಲೀಟರ್ ₹26, ಹೊಸ ದರ 28ರೂ
ಹೋಮೋಜಿನೆಸ್ಟ್ ಹಸುವಿನ ಹಾಲು ಒಂದು ಲೀಟರ್ ₹ 48, ಹೊಸ ದರ 52 ರೂ
ಸ್ಪೆಷಲ್ ಹಾಲು ಅರ್ಧ ಲೀಟರ್ ₹27, ಹೊಸ ದರ 29ರೂ
ಸ್ಪೆಷಲ್ ಹಾಲು ಒಂದು ಲೀಟರ್ ₹50, ಹೊಸ ದರ 54 ರೂ
ಶುಭಂ ಹಾಲು ಅರ್ಧ ಲೀಟರ್ ₹27, ಹೊಸ ದರ 29 ರೂ
ಶುಭಂ ಹಾಲು ಒಂದು ಲೀಟರ್ ₹50, ಹೊಸ ದರ 54ರೂ
ಸಮೃದ್ಧಿ ಹಾಲು ಅರ್ಧ ಲೀಟರ್ ₹28- ಹೊಸ ದರ 30 ರೂ
ಸಮೃದ್ಧಿ ಹಾಲು ಒಂದು ಲೀಟರ್ ₹56, ಹೊಸ ದರ 60 ರೂ


