ಗದಗ : ಗದಗ ಜಿಲ್ಲಾ ಪೋಲಿಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿ, ವಿವಿಧ ಕಳ್ಳತನ ಪ್ರಕರಣ ಬೇದಿಸಿ ಮೂಲ ವಾರಸುದಾರರಿಗೆ ಟ್ರ್ಯಾಕ್ಟರ್ ಟೇಲರ್, ಬೈಕ್, ಮೊಬೈಲ್, ಚಿನ್ನದ ಸರ ಸೇರಿದಂತೆ ವಿವಿಧ ವಸ್ತುಗಳನ್ನು ಎಡಿಜಿಪಿ ಸಿಎಲ್ ಮತ್ತು ಎಮ್ ಬೆಂಗಳೂರು, ಎಸ್ ಮುರಗನ್ ಮುಖಾಂತರ ಹಸ್ತಾಂತರಿಸಲಾಯಿತು.
ನಗರದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಜಪ್ತಿ ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ 35,13,000ರೂ ಮೌಲ್ಯದ 210ಮೊಬೈಲ್, 3,45,000 ಮೌಲ್ಯದ 10ಬೈಕ್ ಗಳು, ಮನೆ ಕಳ್ಳತನ ಪ್ರಕರಣದ 1,20,000ರೂ ಮೌಲ್ಯದ ಚಿನ್ನಾಭರಣಗಳನ್ನು ಮೂಲ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಎ.ಡಿ.ಜಿ.ಪಿ, ಎಸ್ ಮುರಗನ್ ಅವರು, ಸಿಇಐಆರ್ ತಂತ್ರಾಂಶ ಉಪಯೋಗಿಸಿ ಕಳುವಾದ ಮೊಬೈಲ್ ಪತ್ತೆ ಹಚ್ಚುವಲ್ಲಿ ಬೆಂಗಳೂರು ನಗರದ ನಂತರ ಗದಗ ಜಿಲ್ಲಾ ಪೋಲಿಸ್ 2ನೇ ಸ್ಥಾನದಲ್ಲಿದೆ. ಜೊತೆಗೆ, ವಾಹನಗಳು, ಟೇಲರ್ ಸೇರಿದಂತೆ ಅನೇಕ ಕಳ್ಳತನ ಪ್ರಕರಣಗಳನ್ನು ಅಧಿಕಾರಿಗಳ ಶ್ರಮದ ಮೂಲಕ ಸಂಬಂಧಪಟ್ಟ ಮಾಲಿಕರಿಗೆ ವಾಪಾಸ್ ಮರಳಿಸಲಾಗಿದೆ. ಜಿಲ್ಲೆಯಲ್ಲಿ ಪೋಲಿಸ್ ಇಲಾಖೆಯಿಂದ ಉತ್ತಮ ಕೇಲಸ ನಡೆಯುತ್ತಿವೆ. ಇದೇ ತರ ಇಂತಹ ಕೇಲಸಗಳು ಮುಂದುವರಿಯಲಿ. ಶ್ರಮಿಸಿದ ಎಲ್ಲ ಪೋಲಿಸ್ ಅಧಿಕಾರಿಗಳಿಗೆ ಅಭಿನಂದನೆಗಳು ಎಂದರು.