Thursday, November 20, 2025
19.9 C
Bengaluru
Google search engine
LIVE
ಮನೆ#Exclusive Newsಫೋಟೋ ನನ್ನ ತಂಗಿಯದ್ದು ಸಹೋದರ ವಿಜಯ್

ಫೋಟೋ ನನ್ನ ತಂಗಿಯದ್ದು ಸಹೋದರ ವಿಜಯ್

ಕೊಡಗು: ನನ್ನ ತಂಗಿಯ ಫೋಟೋವನ್ನು ಇಟ್ಟುಕೊಂಡು ಸುಜಾತ ಭಟ್, ತನ್ನ ಮಗಳು ಅನನ್ಯಾ ಭಟ್ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಾಸಂತಿ ಅವರ ಸಹೋದರ ವಿಜಯ್ ಹೇಳಿದ್ದಾರೆ.

ನನ್ನ ತಂಗಿಯ ಫೋಟೋವನ್ನು ದುರ್ಬಳಕೆ ಮಾಡಲಾಗುತ್ತಿದೆ. ವಾಸಂತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳಲ್ಲ. ಆಕೆ ಕೊಡವ ಸಮಾಜಕ್ಕೆ ಸೇರಿದವಳು. ನನ್ನ ತಂಗಿಯ ಫೋಟೋ ನೋಡಿ ನಾವು ಆಘಾತಗೊಂಡಿದ್ದೇವೆ ಎಂದು ತಿಳಿಸಿದರು. ನನ್ನ ತಂಗಿ ಮತ್ತು ಶ್ರೀವತ್ಸ ಪ್ರೀತಿಸಿ 2007 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಒಂದೇ ತಿಂಗಳಿಗೆ ವಿರಾಜಪೇಟೆಗೆ ಆಗಮಿಸಿದ್ದರು. ನಂತರ ಅವರು ಕೆದ್ದಮುಳ್ಳುರು ಗ್ರಾಮದ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮೃತದೇಹದಲ್ಲಿದ್ದ ಬಟ್ಟೆ ಹಾಗೂ ಅವರ ಚಹರೆಗಳನ್ನು ತೋರಿಸಿದಾಗ ನನ್ನ ಸಹೋದರಿ ಎನ್ನುವುದು ದೃಢಪಟ್ಟಿತ್ತು ಎಂದು ವಿಜಯ್ ಹೇಳಿದರು. ನನ್ನ ತಂಗಿಯನ್ನು ಅವರು ತನ್ನ ಮಗಳು ಎಂದು ಹೇಗೆ ಹೇಳುತ್ತಾರೆ? ಆ ಫೋಟೋ ನೋಡಿದರೆ 100% ನನ್ನ ತಂಗಿ ಎನ್ನುವುದು ಗೊತ್ತಾಗುತ್ತದೆ. ಈಗ ಎಸ್‌ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಮುಂದೆ ಕುಟುಂಬದರ ಜೊತೆ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ್ ತಿಳಿಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments