SportsTop News

ಕ್ರಿಕೆಟಿಗ್ ರಿಂಕು ಜೊತೆ ರಿಂಗ್ ಬದಲಿಸಿದ ಸಂಸದೆ

ಸಮಾಜವಾದಿ ಪಕ್ಷದ ಸಂಸದೆ ಜೊತೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್ ಆಗಿದ್ದಾರೆ.

ಉತ್ತರ ಪ್ರದೇಶದ ಮಚ್ಲಿಶಹರ್​​ ಕ್ಷೇತ್ರ ಎಂಪಿ ಪ್ರಿಯಾ ಸರೋಜ್ ಜೊತೆ ರಿಂಕು ಸಿಂಗ್ ಉಂಗುರ ಬದಲಿಸಿಕೊಂಡಿದ್ದಾರೆ.

ಕುಟುಂಬಸ್ಥರು, ಸಂಬಂಧಿಕರ ಸಮ್ಮುಖದಲ್ಲಿ ಲಕ್ನೋದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದೆ.

ಸಮಾಜವಾದಿ ಮುಖ್ಯಸ್ಥ ಮಾಜಿ ಸಿಎಂ ಅಖಿಲೇಶ್ ಯಾದವ್, ಪತ್ನಿ ಮತ್ತು ಸಂಸದೆ ಡಿಂಪಲ್ ಯಾದವ್, ಖ್ಯಾತ ನಟಿ ಜಯಾಬಚ್ಚನ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಹಲವು ರಾಜಕೀಯ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದ್ರು.

26 ವರ್ಷದ ಪ್ರಿಯಾ 2024ರಲ್ಲಿ ರಾಜಕೀಯ ರಂಗ ಪ್ರವೇಶಿಸಿದ್ರು.ಇನ್ನು ಪ್ರಿಯಾ ಸರೋಜ್ ಅಪ್ಪ ಶಾಸಕ ತೂಫಾನಿ ಸರೋಜ್. ಈ ಹಿಂದೆ ಸೈದ್​ ಪುರ, ಮಚ್ಲಿಶಹರ್​​ನಿಂದ ಸಂಸದರಾಗಿದ್ರು.

27 ವರ್ಷದ ಕ್ರಿಕೆಟಿಗ ರಿಂಕು ಸಿಂಗ್, ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ಪರ ಆಡುತ್ತಿದ್ದಾರೆ.

ರಿಂಕು ಸಿಂಗ್, ಪ್ರಿಯಾ ಸರೋಜ್ ಮದುವೆ, ನವೆಂಬರ್ 18ರಂದು ವಾರಣಾಸಿಯ ತಾಜ್ ಹೋಟೆಲ್​​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

Comments (0)

Your email address will not be published. Required fields are marked *

Back to top button