ಧಾರವಾಡ: ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಖಂಡಿಸಿ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿರುವ ಬಂದ್ ಕರೆಯ ಬಿಸಿ ಧಾರವಾಡಕ್ಕೆ ಸದ್ಯಕ್ಕೆ ತಟ್ಟಿಲ್ಲ. ಆದರೆ ಕರವೇ ಶಿವರಾಮೇಗೌಡ ಬಣ ಪ್ರತಿಭಟನೆ ಮೂಲಕ ಬೆಂಬಲ ನೀಡಿದ್ದು, ಮಾದ್ಯಾಹ್ನದ ನಂತರ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.
ಪೇಡಾನಗರಿ ಧಾರವಾಡದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ, ಮುಂಗಟ್ಟುಗಳು ಪ್ರತಿದಿನದಂತೆ ಬಾಗಿಲು ತೆರಿದು ವ್ಯಾಪಾರ ವಹಿವಾಟು ಆರಂಭಿಸಿವೆ. ಜತೆಗೆ ಅಟೋ, ಸರ್ಕಾರಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ನಡೆಸುತ್ತಿವೆ. ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಕಾರ್ಯಾರಂಭ ಮಾಡಿವೆ. ಈ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಬೆಂಬಲವನ್ನೇನೋ ನೀಡಿದ್ದಾರೆ. ಆದರೆ, ಅವರು ಪ್ರತಿಭಟನೆ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಧಾರವಾಡದಲ್ಲಿ ವ್ಯಾಪಾರ, ವಹಿವಾಟು ಮಾತ್ರ ಎಂದಿನಂತೆ ಕಾರ್ಯಾರಂಭ ಮಾಡಿರುವ ದೃಶ್ಯಗಳು ಕಂಡುಬಂದವು.