ದೆಹಲಿ: ಉಪರಾಷ್ಟ್ರಪತಿ ಆಯ್ಕೆ ಸಂಬಂಧ ಸೆಪ್ಟೆಂಬರ್ 9ರಂದು ಚುನಾವಣೆ ನಡೆಸುವುದಾಗಿ ಚುನಾವಣೆ ಆಯೋಗ ಘೊಷಣೆ ಮಾಡಿದೆ.
ಜಗದೀಪ್ ಧನಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಅಭ್ಯರ್ಥಿಗಳು ಆಯ್ಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಪರಾಷ್ಟ್ರಪತಿ ಚುನಾವಣೆಗೆ ಗುರುವಾರವಷ್ಟೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿತ್ತು.
ಧನಕರ್ ಅವರು ಜುಲೈ 21 ರಂದು ಹಠಾತ್ ರಾಜೀನಾಮೆಯಿಂದ ಉಪರಾಷ್ಟ್ರಪತಿ ಚುನಾವಣೆ ಅನಿವಾರ್ಯವಾಯಿತು. ಇದು ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಅಪರೂಪದ ಮಧ್ಯಂತರ ಖಾಲಿ ಹುದ್ದೆಗೆ ಕಾರಣವಾಯಿತು. ಇನ್ನೂ 2 ವರ್ಷ ಧನಕರ್ ಅವರ ಅಧಿಕಾರಾವಧಿ ಇತ್ತು.
ಚುನಾವಣಾ ಪ್ರಕ್ರಿಯೆ ಹೇಗೆ..?
ಆಗಸ್ಟ್ 7 ರಂದು ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಟಣೆ
ಆಗಸ್ಟ್ 21 ರಂದು ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ
ಆಗಸ್ಟ್ 22 ರಂದು ನಾಮಪತ್ರಗಳ ಪರಿಶೀಲನೆಗೆ ದಿನಾಂಕ
ಆಗಸ್ಟ್ 25ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ
ಸೆಪ್ಟೆಂಬರ್ 09 ಮತದಾನದ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ
ಸೆಪ್ಟೆಂಬರ್ 09 ಮತ ಎಣಿಕೆ ಕಾರ್ಯ


