ಬಣ್ಣಬಣ್ಣದ ಮಾತನಾಡಿ ಬಂಗಾರದ ಪಂಜರ ಕಟ್ಟಿದ್ದ ಸುಂದರಿ ಐಶ್ವರ್ಯ ಇದೀಗ ಪರಪ್ಪನ ಅಗ್ರಹಾರದ ಕಬ್ಬಿಣದ ಪಂಜರದೊಳಗೆ ಲಾಕ್ ಆಗಿದ್ದಾಳೆ. ಚಿನ್ನ ವಂಚನೆ ಕೇಸ್ನಲ್ಲಿ ಐಶ್ವರ್ಯ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನವಾಗಿದ್ದು, ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದಿದ್ದಾರೆ.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜ್ಯುವೆಲ್ಲರ್ಸ್ ಮಾಲೀಕರಿಗೆ 14 ಕೆಜಿ ಚಿನ್ನ ವಂಚಿಸಿದ ಪ್ರಕರಣದಲ್ಲಿ ಎ1 ಐಶ್ವರ್ಯ ಗೌಡ, ಎ2 ಹರೀಶ್ ಗೌಡರನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದರು. ಡಿ.ಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಬಣ್ಣ ಬಣ್ಣದ ಮಾತನಾಡಿ, ನಾಮ ಹಾಕಿದ್ದ ಐಶ್ವರ್ಯ ಮತ್ತು ಆಕೆಯ ಪತಿ ವಿಚಾರಣೆಗಾಗಿ ಚಂದ್ರಲೇಔಟ್ ಠಾಣೆಗೆ ಹಾಜರಾಗಿದ್ದರು. ಸುಮಾರು 3 ಗಂಟೆಗಳ ಪೊಲೀಸರ ವಿಚಾರಣೆ ಬಳಿಕ ಪೊಲೀಸರು ದಂಪತಿಯನ್ನು ಅರೆಸ್ಟ್ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಈ ವೇಳೆ ಐಶ್ವರ್ಯ ಮತ್ತು ಆಕೆಯ ಪತಿ ಹರೀಶ್ ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದರು. ಬಳಿಕ ಪೊಲೀಸರು ಇಬ್ಬರನ್ನೂ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದರು.
ಚಿನ್ನದ ವಂಚನೆ ಕೇಸ್ನಲ್ಲಿ ಜೈಲು ಸೇರಿರುವ ವಂಚಕಿ ಐಶ್ವರ್ಯಗೆ ಇವತ್ತು ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಕೊಡಲಿದ್ದಾರೆ. ಇನ್ನು ಹೆಚ್ಚಿನ ತನಿಖಾಗಿ ಪೊಲೀಸರು ಡಿಸೆಂಬರ್ 30 ಅಂದರೆ ಸೋಮವಾರ ಮತ್ತೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.