ಅಮೆರಿಕ : ಆಕೆ ಅದಿನ್ನೆಂಥಾ ಕ್ರೂರಿ ತಾಯಿ ಇರಬೇಕು ಹೇಳಿ.. ಅದೇನು ಬೇಕಂತ ಮಾಡಿದಳೋ..ಅಥವಾ ಅವಳು ಮಾನಸಿಕ ಅಸ್ವಸ್ಥಳೋ ಗೊತ್ತಿಲ್ಲ. ಒಂದು ತಿಂಗಳ ಮಗು ಓವನ್ ಒಳಗೆ ಬೆಂದು ಹೋಗಿತ್ತು.
ಹೃದಯ ವಿದ್ರಾವಕ ಘಟನೆಯೊಂದು ಅಮೆರಿಕದ ಮಿಸೌರಿಯಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಮಗುವನ್ನು ಸುಟ್ಟು ಕೊಂದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಆದರೆ ತಾನು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿಲ್ಲವೆಂದು ಹೇಳಿದ್ದರೂ ಕೂಡ ಮಹಿಳೆಯ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಿಕೊಂಡಿದ್ದು, ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ತಾಯಿಯ ಹೇಳಿಕೆಯ ಪ್ರಕಾರ ಮಗುವನ್ನು ತೊಟ್ಟಿಲಲ್ಲಿ ಮಲಗಿಸುವ ಬದಲು ಓವಲ್ನಲ್ಲಿಟ್ಟು ಸ್ವಿಚ್ ಹಾಕಿ ಮಲಗಿದ್ದಳು . ಇದರಿಂದ ಮಗು ಸುಟ್ಟು ಕರಕಲಾಗಿ ಸಾವನ್ನಪ್ಪಿದೆ. ಇದೀಗ ತಾಯಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾಳೆಯೇ ಅಥವಾ ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾನ್ಸಾಸ್ ನಗರದಲ್ಲಿ ಈ ಘಟನೆ ನಡೆದಿದೆ. ಸುದ್ದಿ ಸಂಸ್ಥೆಯೊಂದರ ಪ್ರಕಾರ, ಮರಿಯಾ ಥಾಮಸ್ ತನ್ನ ನವಜಾತ ಮಗುವನ್ನು ಕೊಂದ ಆರೋಪ ಹೊತ್ತಿದ್ದಾರೆ. ಶುಕ್ರವಾರ, ಕಾನ್ಸಾಸ್ ಸಿಟಿ ಪೊಲೀಸರಿಗೆ ಮರಿಯಾ ಎಂಬ ಮಹಿಳೆ ತನ್ನ ಮಗುವನ್ನು ಒಲೆಯಲ್ಲಿ ಸುಟ್ಟು ಸಾಯಿಸಿದ್ದಳು ಎಂಬ ಮಾಹಿತಿ ಸಿಕ್ಕಿತು. ಪೊಲೀಸರು ತನಿಖೆ ಆರಂಭಿಸಿದಾಗ, ರಾತ್ರಿ ಮಗುವಿಗೆ ಹಾಲುಣಿಸಿದ ನಂತರ ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್ನಲ್ಲಿ ಮಲಗಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ.