ಇಂದು ಆರಂಭವಾಗಲಿರುವ ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಭಾರತ್ ಪೆಟ್ರೋಲಿಯಂ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಿರುವ ರಿಲಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿ ಕಣಕ್ಕಿಳಿದಿದ್ದಾರೆ. ಪುಣೆಯಲ್ಲಿ ನಡೆದ 2023ರ ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಪಾಂಡ್ಯ ಪಾದದ ಗಾಯಕ್ಕೆ ತುತ್ತಾಗಿದ್ದರು.
ಕ್ರಿಕೆಟ್ ನೆಕ್ಸ್ಟ್ ಈ ಹಿಂದೆ ವರದಿ ಮಾಡಿದಂತೆ , ಟಿ20 ವಿಶ್ವಕಪ್ ಮತ್ತು ವೈಟ್-ಬಾಲ್ ಕಾರ್ಯಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಹಾರ್ದಿಕ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿತ್ತು. 30 ವರ್ಷ ವಯಸ್ಸಿನ ಪಾಂಡ್ಯ ಅಂದಿನಿಂದ ತಮ್ಮ ಫಿಟ್‌ನೆಸ್‌ಗಾಗಿ ಶ್ರಮಿಸುತ್ತಿದ್ದರು. ಇದೀಗ ಬರೋಬ್ಬರಿ ನಾಲ್ಕು ತಿಂಗಳ ನಂತರ ಮೊದಲ ಬಾರಿಗೆ ಮೈದಾನಕ್ಕೆ ಇಳಿಯಲಿದ್ದಾರೆ.
ಅನೇಕ ಐಪಿಎಲ್ ಆಟಗಾರರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ಸಿದ್ಧತೆಗಾಗಿ ಈ ಪಂದ್ಯಾವಳಿಯಲ್ಲಿ ಆಡುತ್ತಾರೆ. ಈಗಾಗಲೇ ರಣಜಿ ಟ್ರೋಫಿ ಗುಂಪು ಹಂತವು ಮುಗಿದಿದೆ, ಮಾರ್ಚ್ 9ರಂದು ಮುಕ್ತಾಯಗೊಳ್ಳುವ ಪಂದ್ಯಾವಳಿಯಲ್ಲಿ ದೇಶದ ಅಗ್ರ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದರ ನಡುವೆ ದಿನೇಶ್ ಕಾರ್ತಿಕ್ ಸಹ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಭಾರತ-ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ವಿಕೆಟ್ ಕೀಪರ್-ಬ್ಯಾಟರ್ ಕಾರ್ತಿಕ್ ಟಿ 20 ಪಂದ್ಯಾವಳಿಯಲ್ಲಿ ಡಿವೈ ಪಾಟೀಲ್ ಬಿ ಪರ ಆಡಲಿದ್ದಾರೆ. ಇದು ಅವರ ಐಪಿಎಲ್ ಟೂರ್ನಿಯ ಪೂರ್ವ ಸಿದ್ಧತಾ ಮ್ಯಾಚ್ ಆಗಿರಲಿದೆ.
ಐಪಿಎಲ್ 2024ರ 17ನೇ ಸೀಸನ್ ಗೂ ಮುನ್ನವೇ ಹಾರ್ದಿಕ್ ಪಾಂಡ್ಯ ಫಿಟ್ ಆಗಿ ಮೈದಾನಕ್ಕೆ ಮರಳುತ್ತಿರುವುದು ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಮುಂಬರುವ ವಿಶ್ವಕಪ್ ವೇಳೆಗೆ ಪಾಂಡ್ಯ ಭಾರತ ತಂಡ ಸೇರಿಕೊಳ್ಳಲಿದ್ದು, ಮಹತ್ವದ ಟೂರ್ನಿಯಲ್ಲಿ ಪಾಂಡ್ಯ ಉಪಸ್ಥಿತಿ ಭಾರತ ತಂಡಕ್ಕೆ ಅಂತ್ಯತ ಮಹತ್ವ ಪೂರ್ಣವಾಗಿರುತ್ತದೆ ಎನ್ನಲಾಗುತ್ತಿದೆ.
ಜೂನ್ 5ರಂದು ಭಾರತ ತಂಡ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಸೆಣಸಲಿದೆ. ಈ ಬಾರಿ ಭಾರತ ತಂಡದ ಪಂದ್ಯದ ಸಮಯವನ್ನು ಐಸಿಸಿ ಪ್ರಕಟಿಸಿದೆ. ಇದು ಭಾರತೀಯ ಅಭಿಮಾನಿಗಳಿಗೆ ಸಂತಸ ತಂದಿದೆ. ಏಕೆಂದರೆ ಭಾರತೀಯ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿನ ಎಲ್ಲಾ ಪಂದ್ಯಗಳನ್ನು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ.