
ರಾಬರ್ಟ್, ಕಾಟೇರ, ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡಿತ್ತು. ಆದರೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ತರುಣ್, ಸೋನಾಲ್ ಮದುವೆ ವಿಷ್ಯ ನಿಜನಾ? ಎಂದು ತಾಯಿ ಮಾಲತಿ ಸುಧೀರ್ ಕ್ಲ್ಯಾರಿಟಿ ನೀಡಿದ್ದಾರೆ.
ತರುಣ್ ಸುಧೀರ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ನಟಿ ಸೋನಾಲ್ ಜೊತೆ ತರುಣ್ ಕಲ್ಯಾಣ ನಡೆಯುತ್ತಿದೆ. ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ ಎಂದು ಮಾಲತಿ ಸುಧೀರ್ ಹಂಚಿಕೊಂಡಿದ್ದಾರೆ. ಮಗನ ಮದುವೆ ದಿನಾಂಕ ಫಿಕ್ಸ್ ಆಗಿಲ್ಲ. ಆಷಾಢ ಮಾಸ ಅಲ್ವಾ? ಕನ್ಫರ್ಮ್ ಆದ್ಮೇಲೆ ಹೇಳ್ತೀವಿ ಎಂದಿದ್ದಾರೆ. ಮದುವೆ ಛತ್ರಗಳು ಅಷ್ಟು ಬೇಗ ಸಿಕ್ತಿಲ್ಲ. ಮಗನ ಕೈಲಿ ಸದ್ಯ ಜಾಸ್ತಿ ಪ್ರಾಜೆಕ್ಟ್ ಇದೆ. ಅದೆಲ್ಲಾ ನೋಡ್ಕೊಂಡು ಮದುವೆ ಮಾಡಿಕೊಳ್ತಾರೆ ಎಂದು ಹೇಳಿದ್ದಾರೆ.

ನಾನೇ ಸರಿಯಾಗಿ ಇನ್ನೂ ಆ ಹುಡ್ಗಿನಾ ನೋಡಿಲ್ಲ. ಮನೆಯವರೆಲ್ಲಾ ಕೂತು ಮಾತಾಡಬೇಕು. ಛತ್ರ ಬುಕ್ ಆದ್ಮೇಲೆ ನಾವೇ ಮಾತಾಡ್ತೀವಿ ಎಂದು ತರುಣ್ ಮತ್ತು ಸೋನಾಲ್ ಮದುವೆ ಸುದ್ದಿಯನ್ನು ಅಧಿಕೃತವಾಗಿ ಖಾತ್ರಿ ಮಾಡಿದ್ದಾರೆ ಮಾಲತಿ ಸುಧೀರ್.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




