ಗೋಟ್ ಮೂವಿಯೇ ಕೊನೆ ಎಂದಿದ್ದ ನಟ ದಳಪತಿ ವಿಜಯ್ .ನಿರಾಶರಾಗಿದ್ದ ಅಭಿಮಾನಿಗಳಿ ಗುಡ್ ನ್ಯೂಸ್ಗ ಕೊಟ್ಟ ದಳಪತಿ. KVN ಪ್ರೊಡಕ್ಷನ್ಸ್ ಇದೀಗ ದಳಪತಿ ವಿಜಯ್ ನಟನೆಯ ತಮಿಳು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ವಿಜಯ್ ಅವರ 69ನೇ ಸಿನಿಮಾ ಮತ್ತು ವೃತ್ತಿ ಬದುಕಿನ ಕೊನೆಯ ಚಿತ್ರ ಇದಾಗಿದ್ದು 500 ಕೋಟಿ ರು.ಗೂ ಅಧಿಕ ಬಂಡವಾಳದಲ್ಲಿ ನಿರ್ಮಾಣಗೊಳ್ಳಲಿದೆ. ತಮಿಳಿನ ಖ್ಯಾತ ನಿರ್ದೇಶಕ ಹೆಚ್ .ವಿನೋದ್ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಇದು ಕೆವಿಎನ್ ಸಂಸ್ಥೆಯ 5ನೇ ಸಿನಿಮಾವಾಗಿದೆ. ವಿಜಯ್ ನಟನೆಯ ಕೊನೆಯ ಸಿನಿಮಾ ಎಂಬಂತೆ ಬಿಂಬಿಸುವ ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ವೀಕ್ಷಣೆ ದಾಖಲಿಸಿದೆ. ಆದರೆ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾ ಘೋಷಣೆಯಾಗಿದ್ದಕ್ಕೆ ಸಂಭ್ರಮಿಸುವ ಬದಲು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯ್ ಸಿನಿಮಾ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವುದು ಅವರ ಬೇಸರಕ್ಕೆ ಕಾರಣ.