Top Newsವಿಶೇಷಸುದ್ದಿ

ಫಾಲ್ಕನ್ ರಾಕೇಟ್​ನಲ್ಲಿ ತಾಂತ್ರಿಕ ಸಮಸ್ಯೆ; ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಮತ್ತೆ ವಿಳಂಬ

ದೆಹಲಿ: ರಾಕೆಟ್‌ನ ಲಾಂಚ್‌ಪ್ಯಾಡ್‌ನಲ್ಲಿ ಕೊನೆಯ ಕ್ಷಣದ ಟೆಕ್ನಿಕಲ್ ಸಮಸ್ಯೆಯಿಂದಾಗಿ ಸ್ಪೇಸ್‌ಎಕ್ಸ್ ಹಾರಾಟವನ್ನು ರದ್ದುಗೊಳಿಸಿದ್ದರಿಂದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲೋರ್ ಭೂಮಿಗೆ ವಾಪಸ್ ಆಗುವುದು ವಿಳಂಬವಾಗಿದೆ.

ಕಳೆದ ಒಂಬತ್ತು ತಿಂಗಳಿನಿಂದ ಇಂಟರ್​ನ್ಯಾಷನಲ್ ಸ್ಫೇಸ್ ಸೇಂಟರ್​ನಲ್ಲಿ  ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲೋರ್ ಭೂಮಿಗೆ ವಾಪಸ್ ಆಗುವುದು ಮತ್ತುಷ್ಟು ವಿಳಂಬವಾಗಿದೆ.

ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ ಫಾಲ್ಕನ್ ರಾಕೆಟ್ ಉಡ್ಡಯನದ ನಿರ್ಣಾಯಕ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ. ಉಡಾವಣಾ ಸ್ಥಗಿತತಗೊಂಡಿತ್ತು, ನಾಸಾ ಕಳುಹಿಸುತ್ತಿರುವ ಗಗನಯಾನಿಗಳು ಐಎಸ್‌ಎಸ್ ತಲುಪಿದ ನಂತರ, ಸುನಿತಾ ಹಾಗೂ ಬುಚ್ ಅವರು ಭೂಮಿಯತ್ತ ಪಯಣ ಆರಂಭಿಸಬೇಕಿದೆ. ಮಾರ್ಚ್13ರಂದು ಅವರನ್ನು ಭೂಮಿಗೆ ಕರೆತರಲು SpaceX ಕಾರ್ಯಾಚರಣೆ ಮಾಡಲಿದೆ ಎಂದು ನಾಸಾ ತಿಳಿಸಿತ್ತು. ಇದೀಗ ಹೈಡ್ರೋಲಿಕ್ ವ್ಯವಸ್ಥೆಯಲ್ಲಿ ಸಮಸ್ಯೆಯಿಂದಾಗಿ ಫಾಲ್ಕನ್ ರಾಕೆಟ್ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇನ್ನಷ್ಟೇ ಹೊಸ ಉಡಾವಣಾ ದಿನಾಂಕವನ್ನ ನಾಸಾ ಘೋಷಣೆ ಮಾಡಬೇಕಿದೆ

Comments (0)

Your email address will not be published. Required fields are marked *

Back to top button