Top Newsರಾಜ್ಯಸುದ್ದಿ

ಟೆಕ್ಕಿ ಅತುಲ್‌ ಆತ್ಮಹತ್ಯೆ ಪ್ರಕರಣ– ತಲೆಮರೆಸಿಕೊಂಡಿದ್ದ ಪತ್ನಿ ಬಂಧನ

ಲಕ್ನೋ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪತ್ನಿ ನಿಖಿತಾ ಸಿಂಘಾನಿಯಾಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತುಲ್‌ ಅತ್ತೆ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್‌ ಸಿಂಘಾನಿಯಾ ಅರೆಸ್ಟ್‌ ಆಗಿದ್ದರು. ಈಗ ಹರಿಯಾಣದ ಗುರುಗ್ರಾಮದಲ್ಲಿ ಅತುಲ್‌ ಪತ್ನಿ ನಿಖಿತಾ ಪೊಲೀಸರಿಗೆ ಲಾಕ್‌ ಆಗಿದ್ದಾಳೆ. ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದರು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದರು.

ಏನಿದು ಪ್ರಕರಣ?

34 ವರ್ಷದ ಇಂಜಿನಿಯರ್ ಸುಭಾಷ್ ಬೆಂಗಳೂರಿನಲ್ಲಿ ಕಳೆದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ನಿಕಿತಾ ಸಿಂಘಾನಿಯಾ ಮತ್ತು ಆಕೆಯ ಸಂಬಂಧಿಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿದೆ.

ಎಫ್​ಐಆರ್​ನಲ್ಲಿ ಏನಿದೆ?

2019ರಲ್ಲಿ ಅತುಲ್ ಸುಭಾಷ್-ನಿಕಿತಾ ಸಿಂಘಾನಿಯ ಮದುವೆಯಾಗಿದ್ದು,ಗಂಡು ಮಗು ಇದೆ. ನಿಕಿತಾ ಸಿಂಘಾನಿಯಾ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ಸೇರಿ ಅತುಲ್ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಆ ಕೇಸ್‌ನ ಇತ್ಯರ್ಥಕ್ಕಾಗಿ ₹3 ಕೋಟಿ ಕೊಡಬೇಕೆಂದು ಒತ್ತಾಯ ಮಾಡ್ತಿದ್ದರು. ಮಗನ ಭೇಟಿಗೆ ಅವಕಾಶ ನೀಡಲು ₹30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ₹3 ಕೋಟಿ ಹಣ ನೀಡದಿದ್ರೆ ನೀನು ಬದುಕಬೇಡ, ಆತ್ಮಹತ್ಯೆ ಮಾಡಿಕೋ ಎಂದು ಅಣುಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ & ದೈಹಿಕವಾಗಿ ನೊಂದು ಆತ್ಮಹತ್ಯೆ ಮಾಡ್ಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Comments (0)

Your email address will not be published. Required fields are marked *

Back to top button