ಶಿಕ್ಷಣಸುದ್ದಿ

ಶಿಕ್ಷಕನ ವರ್ಗಾವಣೆ ಬೆನ್ನಲ್ಲೇ 133 ಮಕ್ಕಳು ಅವರ ಜತೆ ಶಿಫ್ಟ್!

ಹೈದರಾಬಾದ್‌: ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಶಿಕ್ಷಕ ಜೆ. ಶ್ರೀನಿವಾಸ್ ವರ್ಗಾವಣೆಯಾಗಿದ್ದು, ಅವರನ್ನು ಹಿಂಬಾಲಿಸಿ 133 ವಿದ್ಯಾರ್ಥಿಗಳೂ ಅವರು ವರ್ಗಾವಣೆಗೊಂಡ ಶಾಲೆ ಸೇರಿದ ಅಪರೂಪದ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ.

ಮಂಚೇರಿಯಲ್ ಜಿಲ್ಲೆಯ ಪೊಣಕಲ್ ಗ್ರಾಮದಲ್ಲಿ ಶ್ರೀನಿವಾಸ್ ಶಿಕ್ಷಕರಾಗಿದ್ದರು. ಅವರನ್ನು ಪೊಣಕಲ್‌ನಿಂದ 3 ಕಿ.ಮೀ ದೂರದ ಅಕ್ಕಪೆಲ್ಲಿಗುಡದಶಾಲೆಗೆವರ್ಗಾಯಿಸಲಾಗಿತ್ತು. ಇದಾದ2ದಿನಗಳಲ್ಲೇ 133 ಪೋಷಕರು ತಮ್ಮ ಮಕ್ಕಳನ್ನು ಅದೇ ಶಾಲೆಗೆ ಸೇರಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ನೆಚ್ಚಿಕೊಂಡು, ಅವರು ಶಾಲೆ ಬಿಡುವಾಗ ಭಾವುಕವಾಗುವುದು ಸಹಜ. ಆದರೆ ಗುರುಗಳು ವರ್ಗವಾಗಿರುವ ಶಾಲೆಗ ಹೋಗಿಸೇರಿಕೊಳ್ಳುವುದನ್ನು ಮೊದಲೆಂದೂ ಕೇಳಿಲ್ಲ ಎಂದು ಜಿಲ್ಲಾಶಿಕ್ಷಣಾಧಿಕಾರಿ ಎಸ್.ಯಾದಯ್ಯ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್, ‘ಇದು ಪೋಷಕರು ನನ್ನ ಮೇಲಿಟ್ಟಿರುವ ನಂಬಿಕೆ ತೋರಿಸುತ್ತದೆ’ ಎಂದಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button