ಸ್ಯಾಂಡಲ್ವುಡ್ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ವಿವಾಹವಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಇವರ ಮದುವೆ ಸಮಾರಂಭವಿದ್ದು ಅತಿಥಿಗಳ ಆಹ್ವಾನಕ್ಕೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ತಯಾರು ಮಾಡಿಸಿದ್ದಾರೆ. ಪ್ರಕೃತಿ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿಸಿದ್ದಾರೆ. ತರುಣ್ ಸುಧೀರ್ ಮತ್ತು ಸೋನಲ್ ಈ ಮದುವೆಗಾಗಿ ನೀಡುತ್ತಿರುವ ಲಗ್ನ ಪತ್ರಿಕೆಯು ಈಗ ಎಲ್ಲರ ಗಮನಸೆಳೆದಿದೆ. ಹೌದು, ಈ ಲಗ್ನಪತ್ರಿಕೆ ಜೊತೆಗೆ ಒಂದು ಖಾಲಿ ಪುಸ್ತಕ, ಅದರಲ್ಲಿ ಬರೆಯೋದಕ್ಕೆ ಎರಡು ಪೆನ್ಸಿಲ್ ಹಾಗೂ ಎರಡು ಪೆನ್ ಇದೆ. ಜೊತೆಗೆ ಸೀಡ್ ಬಾಲ್ ಕೂಡ ಇದೆ. ವಿಶೇಷವೆಂದರೆ, ಮದುವೆ ಮುಗಿದ ನಂತ್ರ ಈ ಲಗ್ನಪತ್ರಿಕೆಯನ್ನು ಒಂದು ಮಣ್ಣಿನ ಪಾಟ್ನಲ್ಲಿ ಹಾಕಿದ್ರೆ ಸಾಕು, ಅದು ಮಣ್ಣಿನಲ್ಲಿ ಬೆರೆತು ಗಿಡವಾಗಿ ಬೆಳೆಯುತ್ತದೆ. ಜೊತೆಗೆ ಕೊಟ್ಟಿರುವ ಖಾಲಿ ಪುಸ್ತಕದಲ್ಲಿ ಏನಾದರೂ ಬರೆಯಬಹುದು. ಅದರ ಹಾಳೆಗಳು ತುಂಬಿದ ಮೇಲೆ, ಅದನ್ನೂ ಕೂಡ ಮಣ್ಣಿನೊಂದಿಗೆ ಸೇರಿಸಿದ್ರೆ ಅಲ್ಲೂ ಒಂದು ಹೂವಿನ ಗಿಡ ಬೆಳೆಯುತ್ತೆ. ಇದರ ಜೊತೆಗೆ ಕೊಟ್ಟಿರುವ ಪೆನ್ ಮತ್ತು ಪೆನ್ಸಿಲ್ ಖಾಲಿ ಆದ್ಮೇಲೆ ಅದನ್ನು ಮಣ್ಣಿಗೆ ಹಾಕಿದರೆ ಹೂವಿನ ಗಿಡವೋ, ತರಕಾರಿ ಗಿಡವೋ ಬೆಳೆಯುತ್ತದೆ. ಹೀಗೆ ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಸಖತ್ ಸ್ಪೆಷಲ್ ಮತ್ತು ಪರಿಸರ ಸ್ನೇಹಿಯಾಗಿ ರೂಪಿಸಿದ್ದಾರೆ ತರುಣ್ ಕಿಶೋರ್ ಸುಧೀರ್ ಮತ್ತು ಸೋನಲ್ ಜೋಡಿ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com