ಬೆಂಗಳೂರು: ಅಣ್ಣ ಲಕ್ಷಾಂತರ ಜನಕ್ಕೆ ಸಹಾಯ ಮಾಡಿದ್ದಾರೆ ಅಂತ ಹೇಳ್ತಿರಾ, ಅಣ್ಣನ ಒಂದು ಸಿನಿಮಾದಿಂದ ಸಾವಿರಾರು ಜನ ಜೀವನ ಮಾಡ್ತಾರೆ ಅಂತೀರಾ, ಅಣ್ಣನ ಸಿನಿಮಾಗೆ ದುಡ್ಡು ಹಾಕಿದವರು ಲಾಸ್ ಆಗಿಲ್ಲ ಅಂತೀರಾ, ಸಹ ಕಲಾವಿದರಿಗೆ ಅವಕಾಶ ಸಿಗುತ್ತವೆ ಅಂತೀರಾ, ಬಾಕ್ಸ್ ಆಫೀಸ್ ಸುಲ್ತಾನ್ ಅಂತೀರಾ, ಅಣ್ಣನನ್ನು “ಪೊಲೀಸ್ ಯೂನಿಫಾರ್ಮ್” ನಲ್ಲಿ ನೋಡೋದೇ ಚಂದ ಅಂತೀರ. ಓಕೆ ಆಲ್ ಇಸ್ ವೆಲ್.. ಒಪ್ಕೊಳೋಣ…
ಇಂತಹ ಪರೋಪಕಾರಿ, “ಪೊಲೀಸ್ ಯೂನಿಫಾರ್ಮ್” ಅಣ್ಣನಿಗೆ ಕನಿಷ್ಠ ಕಾನೂನಿನ ತಿಳುವಳಿಕೆ ಇರಬೇಕಿತ್ತಲ್ವಾ…!? ಹಿಂಸೆ ಮಹಾಪಾಪ/ಅಪರಾಧ ಎಂಬ ಅರಿವಿರಬೇಕಿತ್ತಲ್ವಾ..!? ರೀಲ್ ನಲ್ಲಿ ಹೀರೋ ಆದವ್ನು, ರಿಯಲ್ ಲೈಫ್ ನಲ್ಲಿ ವಿಲನ್ ಆಗಬಾರದು ಎಂಬ ಕನಿಷ್ಠ ಜವಾಬ್ದಾರಿ ಇರಬೇಕಿತ್ತಲ್ವಾ..!? ಸಿನಿಮಾಗಳಲ್ಲಿ ಜೆಸಿಬಿ ಮುರಿದು ಬೀಳುವ ಹಾಗೆ ಹೊಡೆದ ಮಾತ್ರಕ್ಕೆ ರಿಯಲ್ ಲೈಫ್ ನಲ್ಲೂ ಹಾಗೆ ಮಾಡುವುದು ತಪ್ಪಲ್ವಾ..!?
ಯಾವ್ದೋ ಮೂಲೆಯಲ್ಲಿ ಅಜ್ಞಾನಿ, ಅನಕ್ಷರಸ್ಥ ಮಾಡುವ ತಪ್ಪನ್ನು ಮಾಫಿ ಮಾಡಿಬಿಡಬಹುದೇನೋ, ಆದರೆ ಸಮಾಜಕ್ಕೆ ಮಾದರಿಯಾದ ವ್ಯಕ್ತಿ ಇಂತಹ ಪಾಪಕೃತ್ಯ ಎಸಗಿದರೆ ಕ್ಷಮಿಸುವುದುಂಟೆ..!? ನಾನು ಸಮಾಜಕ್ಕೆ ಮಾದರಿ ವ್ಯಕ್ತಿ. ನನ್ನಿಂದ ತಪ್ಪು ಸಂದೇಶ ಹೋಗಬಾರದು ಎಂಬುದನ್ನ ತಿಳಿದಿರಬೇಕಿತ್ತಲ್ವಾ..!?
ತನಿಷಾ ಮೇಡಮ್ ಆ್ಯಂಗಲ್ ನಲ್ಲಿ ಹೇಳುವುದಾರೆ, “ಜನರು ಕೊಟ್ಟ ಹಣ ಮತ್ತು ತನ್ನ ಪ್ರಭಾವ ಬಳಸಿಕೊಂಡು ಸಾಕ್ಷಿಯನ್ನೇ ನಾಶಪಡಿಸಲು ಹೋದಂತಹ ಈ ವ್ಯಕ್ತಿ ಜೈಲಿನಿಂದ ಹೊರಬರದಿರುವುದೇ ಒಳ್ಳೆಯದು”. ಹೊಟ್ಟೆ ಹೊರ್ಕೊಳೋಕೆ ಸಾಕಷ್ಟು ದಾರಿಗಳಿವೆ. ಸಮಾಜ ಒಪ್ಪುವ ಮಾರ್ಗದಲ್ಲಿ ಮುನ್ನೆಡೆಯೋಣ.
“ಮನೆಗೆ ಮಾರಿ, ಜೀವ ತೆಗೆಯಲು ಹಾರಿ, ಇನ್ನೊಬ್ಬರಿಗೆ ಉಪಕಾರಿ”ಯಾದವನು ನಿಮಗೆ “ಇನ್ಸ್ಪಿರೇಷನ್” ಆಗದಿರಲಿ ಮೇಡಮ್.. ಒಂದು ಜೀವ ಹೋಗಿದ್ದೇ ಒಳ್ಳೆಯದ್ದು ಎಂದು ಹೇಳುವ ನಿಮ್ಮ ಅಮಾನವೀಯ ಮನಸ್ಸಿಗೆ ನನ್ನದೊಂದು ಧಿಕ್ಕಾರವಿರಲಿ..
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com


