
ಕೊಪ್ಪಳ: ಕೊಪ್ಪಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ತಾಲೂಕಿನ ಇರಕಲ್ ಗಡಾ ಗ್ರಾಮದಲ್ಲಿ ಗಾಂಜಾಮಾರಾಟ ಮಾಡುತ್ತಿದ್ದ ನಿಂಗಪ್ಪ ಗುರಿಕಾರ, ಮಾರುತಿ ಗುರಿಕಾರ, ರವಿ ಗುರಿಕಾರ ಮತ್ತು ನಾಗಪ್ಪ ಕುದರಿಮೋತಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಬಗ್ಗೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬಂಧಿತರಿಂದ 630ಗ್ರಾಂ ಗಾಂಜಾ ಹಾಗೂ 15 ಗಾಂಜಾ ಗಿಡಗಳ ಜಪ್ತಿ ಮಾಡಲಾಗಿದೆ. ಇತ್ತ ಗಂಗಾವತಿ ತಾಲೂಕಿನಲ್ಲಿ ಗಾಂಜಾ ಸೇವಿಸುತ್ತಿದ್ದ ನಾಲ್ವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




