ಸಿನಿಮಾಸುದ್ದಿ

ಊದಿಕೊಂಡಿದ್ದ ಕಾಲು – ಕಾಂತಾರ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ಸುಸ್ತಾಗಿ ಮಲಗಿದ್ದ ರಿಷಬ್

ಬೆಂಗಳೂರು: ಕಾಂತಾರ ಚಾಪ್ಟರ್​​-1 ಸಿನಿಮಾ ಬಾಕ್ಸ್​​ ಆಫೀಸ್​​​​ ನಲ್ಲಿ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ.. ನಟ ನಿರ್ದೇಶಕ ರಿಷಬ್​​​​ ಶೆಟ್ಟಿ ಅವರ ಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ..

ಇನ್ನೊಂದೆಡೆ ಕಾಂತಾರ ಸಿನಿಮಾವನ್ನ ಮೆಚ್ಚಿ ಹಾಡಿ ಹೊಗಳುತ್ತಿರೋದಕ್ಕೆ ತೆರೆ ಮರೆಯಲ್ಲಿ ಆದ ಆ ದಿನದ ಹೋರಾಟ ಹೇಗಿತ್ತು ಅಂತಾ ರಿಷಬ್ ಶೆಟ್ಟಿ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.

ಈ ನಡುವೆ ಚಿತ್ರಕ್ಕೆ ರಿಷಬ್ ಅವರು ವರ್ಷಗಳ ಕಾಲ ಪಟ್ಟ ಶ್ರಮದ ಕುರಿತು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪ್ರಶಂಸೆಗಳು, ಟೀಕೆಗಳ ನಡುವೆ ರಿಷಬ್ ಶೆಟ್ಟಿ ಅವರು ಸಾಮಾಜಿಕ ತಾಣದಲ್ಲಿ ಚಿತ್ರದ ರೋಮಾಂಚನಕಾರಿ ಸನ್ನಿವೇಶಗಳಿಂದ ಕೂಡಿರುವ ಕೈಮಾಕ್ಸ್ ಹಂತದ ಚಿತ್ರೀಕರಣದ ವೇಳೆಯ ತನ್ನ ಕಾಲುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೈಮಾಕ್ಸ್ ಶೂಟಿಂಗ್ ಸಮಯ… ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ.. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವಹಾಗೆ ಆಗಿದೆ.. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ.. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು.. ಎಂದು ಬರೆದಿದ್ದಾರೆ.

Comments (0)

Your email address will not be published. Required fields are marked *

Back to top button