ಬೆಂಗಳೂರು ನಗರ ಜಿಲ್ಲೆ ಅಕ್ಟೋಬರ್ 22 (ಕರ್ನಾಟಕ ವಾರ್ತೆ): ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(8) ತಿದ್ದುಪಡಿ ವಿರೋಧಿಸಿ ಉಪ ನೋಂದಣಾಧಿಕಾರಿಗಳು ನೋಂದಣಿ ಸ್ಥಗಿತಗೊಳಿಸಿರುವುದಾಗಿ ಸಾಮಾಜಿಕ ಜಾಲತಾಣ ಮತ್ತು ಮಾದ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಕೆ.ಎ ದಯಾನಂದ ಅವರು ವದಂತಿಯನ್ನು ನಿರಾಕರಿಸಿ ಸ್ಪಷ್ಟೀಕರಣ ನೀಡಿದ್ದಾರೆ.
ಅಕ್ಟೋಬರ್ 21 ರಂದು ರಿಜಿಸ್ಟ್ರೇಷನ್ ಕಾಯ್ದೆ 1908 ರ ನಿಯಮ 22(B) ತಿದ್ದುಪಡಿ ವಿರೋದಿಸಿ ಐದಾರು ಉಪ ನೋಂದಣಾಧಿಕಾರಿಗಳು ನೋಂದಣಿಯನ್ನು ಕೆಲಕಾಲ ಸ್ಥಗಿತಗೊಳಿಸಿದ್ದು ಸರಿಯಿರುತ್ತದೆ. ಆದರೆ, ನಂತರ ಉಪ ನೋಂದಣಾಧಿಕಾರಿಗಳೊಂದಿಗೆ ಚರ್ಚಿಸಿ ನೋಂದಣಿ ಕಾರ್ಯ ಎಂದಿನಂತೆಯೇ ಮುಂದುವರೆಸಲು ಕ್ರಮ ವಹಿಸಲಾಗಿದೆ ಎಂದಿರುವ ಅವರು, ಪ್ರಸ್ತುತ ಯಾವುದೇ ಸಮಸ್ಯೆ ಇರುವುದಿಲ್ಲ. ಯಾರೇ ನೋಂದಣಿ ಮಾಡಿಸಿಕೊಳ್ಳಲು ಇಚ್ಛಿಸುವವರು ನೋಂದಣಿ ಮಾಡಿಸಬಹುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ.