ಕ್ರೈಂ ಸ್ಟೋರಿ

ಶಿಕ್ಷಕಿ ಎಸಗಿದ ತಪ್ಪಿಗೆ ಹೊಯ್ತು ವಿದ್ಯಾರ್ಥಿ ಕಣ್ಣು

ಚಿಂತಾಮಣಿ: ಶಿಕ್ಷಕಿ ತಪ್ಪಿಗೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡ ಪ್ರಕರಣ ಸಂಬಂಧ, ದೂರು ಸ್ವೀಕರಿಸಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ.

ಪ್ರಕರಣ ಸಂಬಂಧ ಪೊಲೀಸ್​ ಠಾಣೆ ಎದುರು, ಮಾಜಿ ಶಾಸಕ ಕೃಷ್ಣಾರೆಡ್ಡಿ ಅಹೋರಾತ್ರಿ ಧರಣಿಗೆ ಮುಂದಾಗಿದ್ರು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಯಗವಕೋಟೆ ಗ್ರಾಮದ ಅಂಜಲಿ, ನಟರಾಜ್ ಮಗ ಯಶವಂತ್. ಶಾಲೆಯಲ್ಲಿ ಪಾಠಪ್ರವಚನದ ವೇಳೆ ಶಿಕ್ಷಕಿ ಸರಸ್ವತಮ್ಮ ಹೊಡೆಯುವಾಗ, ವಿದ್ಯಾರ್ಥಿಯ ಕಣ್ಣಿಗೆ ಕೋಲು ತಗುಲಿದೆ. ಇದರಿಂದ ಯಶವಂತ್ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಪೋಷಕರು ದೂರು ನೀಡಲು ಠಾಣೆಗೆ ಹೋಗಿದ್ದಾರೆ. ಆದರೆ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು, ಸಬೂಬು ಹೇಳುತ್ತಾ ದೂರು ಸ್ವೀಕರಿಸದೆ ನಿರ್ಲಕ್ಷ್ಯಿಸಿದ್ದಾರೆ. ಪೋಷಕರ ಆರೋಪ ಹಿನ್ನೆಲೆ ಬಟ್ಲಹಳ್ಳಿ ಠಾಣೆ ಪೊಲೀಸರ ವಿರುದ್ಧ, ನೂರಾರು ಬೆಂಬಲಿಗರ ಜೊತೆ ಮಾಜಿ ಶಾಸಕ ಕೃಷ್ಣಾರೆಡ್ಡಿ, ಅಹೋರಾತ್ರಿ ಧರಣಿಗೆ ಮುಂದಾಗಿದ್ರು.

 

Comments (0)

Your email address will not be published. Required fields are marked *

Back to top button