Wednesday, September 10, 2025
27.2 C
Bengaluru
Google search engine
LIVE
ಮನೆ#Exclusive NewsTop Newsಬಡವರ ಮಕ್ಕಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡೋದು ಬಿಡಿ - ಪ್ರಿಯಾಂಕ್​ ಖರ್ಗೆ

ಬಡವರ ಮಕ್ಕಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡೋದು ಬಿಡಿ – ಪ್ರಿಯಾಂಕ್​ ಖರ್ಗೆ

ಕಲಬುರಗಿ: ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಜೆಪಿ ಮಾತಾಡಲ್ಲ. ಅಸ್ಥಿತ್ವ, ಕುರ್ಚಿ ಉಳಿಸಿಕೊಳ್ಳಲು,RSS ಮನವೊಲಿಸಲು ಈ ರೀತಿ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಇವರು ಮದ್ದೂರು ಶಾಂತಿ ಸಭೆಗೆ ಬಂದಿಲ್ಲ.. ನಾಚಿಗೆಯಾಗಬೇಕು. ಹೋದ ಬಾರಿ ಮಂಡ್ಯ ಚಲೋ ಮಾಡಿದ್ರು.. ಈ ಬಾರಿ ಮದ್ದೂರು ಚಲೋ ಮಾಡಿದ್ರು ಏನಾಯಿತು.. ಧರ್ಮಸ್ಥಳ ಚಲೋ ಕೂಡ ಮಾಡಿದ್ರು ,ಸೌಜನ್ಯ ಮನೆಗೆ ಹೋದ್ರು. ಬಿಜೆಪಿ ಧರ್ಮಸ್ಥಳದ ಪರನಾ.. ಸೌಜಬನ್ಯ ಪರನಾ ಸ್ಪಷ್ಟಪಡಿಸಲಿ ಎಂದಿದ್ದಾರೆ.

ಬಿಜೆಪಿಯವರಿಗೆ ಕೆಲಸವಿಲ್ಲ, ನಾಚಿಕೆ, ಮಾನ, ಮರ್ಯಾದೆ ಇಲ್ಲ. ಉರಿಗೌಡ, ನಂಜೇಗೌಡ ಕಥೆ ಕಟ್ಟಿದ್ದೀರಿ, ಎಲ್ಲಿ ಹೋದರು ಅವರು? ಅಮಾಯಕರನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡಬೇಡಿ. ನಿಮ್ಮ ಮಕ್ಕಳನ್ನು ವಿದೇಶದಿಂದ ಕರೆತಂದು ಮದ್ದೂರು ಚಲೋ ಆಯೋಜಿಸಿ,” ಎಂದು ವ್ಯಂಗ್ಯವಾಡಿದರು. ಮದ್ದೂರು ಗಲಭೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ ಪ್ರಕರಣದ ತನಿಖೆ ನಡೆಯುತ್ತಿದ್ದು, ಈಗಾಗಲೇ 21 ಜನರ ಬಂಧನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments