Tuesday, June 24, 2025
25.9 C
Bengaluru
Google search engine
LIVE
ಮನೆ#Exclusive Newsಹೊಟ್ಟೆಯಲ್ಲಿ 20 ಕೋಟಿ ಮೌಲ್ಯದ ಕೊಕೇನ್ನೊಂದಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ಬಂಧನ...

ಹೊಟ್ಟೆಯಲ್ಲಿ 20 ಕೋಟಿ ಮೌಲ್ಯದ ಕೊಕೇನ್ನೊಂದಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ಬಂಧನ ..!


Freedom Tv Desk :
ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಪ್ರಯಾಣಿಕರಿಂದ 20 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಪ್ರಜೆಯೊಬ್ಬ ತನ್ನ ಹೊಟ್ಟೆಯೊಳಗೆ ಕ್ಯಾಪ್ಸುಲ್​ಗಳಲ್ಲಿ ಕೊಕೇನ್​ಅನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದರು. ಕಸ್ಟಮ್ಸ್ ಅಧಿಕಅರಿಗಳು 99ಕ್ಯಾಪ್ಸುಲ್​ಗಳಲ್ಲಿ ಬಚ್ಚಿಟ್ಟಿದ್ದ 2ಕೋಟಿ ಕೊಕೇನ್​ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕ ಇಥಿಯೋಪಿಯಾದ ಅಡಿಸ್ ಅಬಾಬಾದಿಂದ ಬೆಂಗಳೂರಿಗೆ ಆಗಮಿಸಿದ್ದರು.


ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಾಣಿಕೆಗೆ ದೊಡ್ಡ ಪ್ರಯತ್ನ , ಇದು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಅತಿದೊಡ್ಡ ಕೊಕೇನ್ ಡ್ರಗ್ ಸರಬರಾಜು ಯತ್ನ ಇದಾಗಿದೆ. ನೈಜೀರಿಯಾ ಪ್ರಜೆ ವೈದ್ಯಕೀಯ ಚಿಕಿತ್ಸೆ ವೀಸಾದಲ್ಲಿ ಭಾರತಕ್ಕೆ ಬಂದಿರುವುದಾಗಿ ವರದಿಯಾಗಿದೆ.

ನೈಜೀರಿಯಾ ಪ್ರಜೆ 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಿ ಕೊಕೇನ್ 99 ಕ್ಯಾಪ್ಸುಲ್ಸ್​ಗಳನ್ನು ಹೊರ ತೆಗೆಯಲಾಗಿದೆ. ಶಂಕಿತ ವ್ಯಕ್ತಿ ಡಿಸೆಂಬರ್​ನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎನ್ನಲಾಗಿದೆ. ಆತನ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್​ಸ್ಪೆನ್ಸ್ ಕಾಯ್ದೆಯಡಿ ಆರೋಪ ಹೊರಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments