Top Newsದೇಶ/ವಿದೇಶಸುದ್ದಿ

ಮಹಾಕುಂಭ ಮೇಳದ ಬಗ್ಗೆ ಗೆಳೆಯನಿಗೆ ಜಾಬ್ಸ್​ ಬರೆದಿದ್ದ ಪತ್ರ ವೈರಲ್..

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾಕುಂಭ ನಡೆಯುತ್ತಿದೆ. ವಿಷಯ ಏನೆಂದರೆ, ಆ್ಯಪಲ್ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಕುಂಭ ಮೇಳಕ್ಕಾಗಿ ಭಾರತಕ್ಕೆ ಬರಲು ಇಚ್ಛಿಸಿದ್ದರು. ಈ ಹಿಂದೆ ತಮ್ಮ ಆತ್ಮೀಯ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದು, ಇಂದು ಆ ಪತ್ರ ಹರಾಜಾಗಿದೆ.

ಸ್ಟೀವ್ ಜಾಬ್ಸ್ ಬರೆದಿರುವ ಪತ್ರವು ಹರಾಜಿನಲ್ಲಿ 500,312 ಡಾಲರ್ ಗೆ ಮಾರಾಟವಾಗಿದೆ. ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಬೋನ್‌ಹಾಮ್ಸ್ ಹರಾಜು ಪ್ರಕ್ರಿಯೆ ನಡೆಸಿದೆ. ಪತ್ರದಲ್ಲಿ ಜಾಬ್ಸ್ ಅವರಿಗಿದ್ದ ಆಧ್ಯಾತ್ಮಿಕ ಚಿಂತನೆಯ ಅಪರೂಪದ ನೋಟವನ್ನು ತೋರಿಸುತ್ತಿದೆ. ಜೊತೆಗೆ ಅವರಿಗಿದ್ದ ಹಿಂದೂ ಧರ್ಮ ಮತ್ತು ಭಾರತದ ಮೇಲಿನ ಆಸಕ್ತಿಯನ್ನು ತೋರಿಸುತ್ತಿದೆ.

ಸ್ಟೀವ್ ಜಾಬ್ಸ್ ತಮ್ಮ ಬಾಲ್ಯದ ಗೆಳೆಯ ಟಿಮ್ ಬ್ರೌನ್​ಗೆ ಬರೆದ ಪತ್ರ ಇದಾಗಿದೆ. 19ನೇ ವರ್ಷದ ಹುಟ್ಟುಹಬ್ಬದ ಹಿಂದಿನ ದಿನ ಜಾಬ್ಸ್​ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಮಹಾಕುಂಭದಲ್ಲಿ ಭಾಗಿಯಾಗಲು ಭಾರತಕ್ಕೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಬ್ರೌನ್ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಪತ್ರ ಬರೆದಿರುವಂತೆ ತೋರುತ್ತದೆ. ಏಪ್ರಿಲ್‌ನಲ್ಲಿ ಆರಂಭವಾಗಲಿರುವ ಕುಂಭಮೇಳಕ್ಕೆ ನಾನು ಭಾರತಕ್ಕೆ ತೆರಳಲು ಬಯಸುತ್ತೇನೆ. ಮಾರ್ಚ್‌ನಲ್ಲಿ ಹೋಗುತ್ತೇನೆ, ಈ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ. ಪತ್ರದ ಕೊನೆಯಲ್ಲಿ ‘ಶಾಂತಿ, ಸ್ಟೀವ್ ಜಾಬ್ಸ್’ ಎಂದು ಬರೆದಿದ್ದಾರೆ.

ಈ ಪತ್ರ ಬೆಳಕಿಗೆ ಬಂದ ನಂತರ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಪತಿಯ ಆಸೆ ಪೂರೈಸಲು ಮಹಾಕುಂಭಕ್ಕೆ ಬಂದು ಹೋಗಿದ್ದಾರೆ. ಪ್ರಯಾಗರಾಜ್​ಗೆ ಆಗಮಿಸಿದದ ಜಾಬ್ಸ್​ ಪತ್ನಿ, ಸ್ವಾಮಿ ಕೈಲಾಶಾನಂದ ಗಿರಿ ಅವರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದುಕೊಂಡಿದ್ದಾರೆ. ಸ್ವಾಮಿ ಕೈಲಾಶಾನಂದ ಗಿರಿ ಲಾರೆನ್ ಪೊವೆಲ್‌ಗೆ ‘ಕಮಲಾ’ ಎಂಬ ಹಿಂದೂ ಹೆಸರನ್ನು ನೀಡಿದ್ದಾರೆ. ಮಹಾಕುಂಭವು ಜನವರಿ 13 ರಿಂದ ಪ್ರಾರಂಭವಾಗಿದೆ.

Comments (0)

Your email address will not be published. Required fields are marked *

Back to top button