ರಷ್ಯಾದಲ್ಲಿ ಭಯೋತ್ಪಾದಕ ದಾಳಿಗಳು ಹೊಸದೇನಲ್ಲ. ಆದರೆ, ಕಳೆದ ಎರಡು ದಶಕದಲ್ಲೇ ಅತ್ಯಂತ ಭೀಕರ ದಾಳಿ ಮಾಸ್ಕೋ ಹೊರವಲಯದಲ್ಲಿ ಭಾರತೀಯಕ ಕಾಲಮಾನ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ನಡೆದುಹೋಗಿದೆ. ಐಸಿಸ್ ಉಗ್ರರು ನಡೆಸಿದ ಘನಘೋರ ದಾಳಿಯಲ್ಲಿ ಕನಿಷ್ಠ 60 ಮಂದಿ ಬಲಿ ಆಗಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಷ್ಯಾದಲ್ಲಿ ಈ ಹಿಂದೆ ನಡೆದ ಭೀಕರ ಭಯೋತ್ಪಾದಕ ದಾಳಿಗಳು
– 2002 -ಚೆಚನ್ಯಾ ಬಂಡುಕೋರರು ಮಾಸ್ಕೋ ಥಿಯೇಟರ್ನಲ್ಲಿ ಸುಮಾರು 800 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ರು. ರಷ್ಯಾ ಪಡೆಗಳು ಕಾರ್ಯಚರಣೆ ನಡೆಸಿ ಒತ್ತೆಯಾಳುಗಳನ್ನು ಬಿಡಿಸಿದ್ರು. ಈ ಕಾರ್ಯಾಚರಣೆಯಲ್ಲಿ 129 ಒತ್ತೆಯಾಳುಗಳು, 41 ಬಂಡುಕೋರರು ಹತ್ಯೆಯಾಗಿದ್ದರು.
– 2004 – ಚೆಚನ್ಯಾ ಬಂಡುಕೋರರು ಬೆಸ್ಲಾನ್ನಲ್ಲಿರುವ ಶಾಲೆಯೊಂದನ್ನು ಅಧೀನಕ್ಕೆ ತೆಗೆದುಕೊಂಡಿತ್ತು. ಒತ್ತೆಯಾಳುಗಳನ್ನು ಕಾಡುವ ಸಂದರ್ಭದಲ್ಲಿ ಬರೋಬ್ಬರಿ 330 ಮಂದಿ ಸಾವನ್ನಪ್ಪಿದ್ದರು. ಇವರಲ್ಲಿ ಅರ್ಧದಷ್ಟು ಮಂದಿ ಚಿಕ್ಕ ಚಿಕ್ಕ ಮಕ್ಕಳಾಗಿದ್ವು.


