ಬೆಂಗಳೂರು : ನರೇಗಾದಡಿ ಉದ್ಯೋಗ ವಿಸ್ತರಿಸಿಲ್ಲ, ಮಳೆ ಬಂದು ಉತ್ತರಕರ್ನಾಟಕ ನೀರಿನಲ್ಲಿ ಮುಳುಗಿತ್ತು, ಆಗ ಜನರ ಸಂಕಷ್ಟ ಆಲಿಸೋಕೆ ಮೋದಿಯವರು ಬರಲಿಲ್ಲ. ಈಗ ಬಂದು ಬಿಟ್ರೆ ಜನ ಕೇಳಿಬಿಡ್ತಾರಾ ಹಾಗಾಗಿ ನಾನು ನನ್ನ ಭಾಷೆಯಲ್ಲಿ ಮಾತನಾಡಿದ್ದೇನೆ ಎಂದು ಶಿವರಾಜ ತಂಗಡಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ ಅಪ್ಪನಿಗೆ ಹುಟ್ಟಿದ್ರೆ ಅಂದಿದ್ದಾರೆ. ಸಿ.ಟಿ. ರವಿಯವರೇ ನೀವು ಯಾರಿಗೆ ಹುಟ್ಟಿದ್ರಿ ಅಂತ ನಾನು ಕೇಳಬಹುದಿತ್ತು ಆದರೆ ನಾನು ಕೇಳುವವನಲ್ಲ. ಹಾಗೊಂದು ವೇಳೆ ನನ್ನ ತಾಯಿಯನ್ನೇ ಬಿಜೆಪಿ ಕಚೇರಿಗೆ ಕರೆತರ್ತೇನೆ ಅವರಿಗೆ ನಿಮ್ಮ ಉತ್ತರ ಕೊಡ್ತೀರಾ..? ನಾನು ಆಡು ಭಾಷೆಯಲ್ಲಿ ಕೇಳಿದ್ದೇನೆ. ಪ್ರತಿಭಟನೆ ಮಾಡುವವರನ್ನ ಗುಂಡಿಕ್ಕಿ ಕೊಲ್ಲಿ ಅಂತ ನಿಮ್ಮ ಕೇಂದ್ರ ಸಚಿವರು ಹೇಳಿದ್ರಲ್ಲಾ ಅವರಿಗೆ ಏನು ಹೇಳ್ತಿರಾ..? ಪ್ರಜ್ಙಾಸಿಂಗ್ ಠಾಕೂರ್ ಏನು ಹೇಳಿದ್ರು, ಚಾಕು ಚೂರಿ ಸರಿಮಾಡಿಕೊಳ್ಳಿ ಅಂದ್ರಲ್ಲ ಅದರ ಬಗ್ಗೆ ನೀವು ಏನು ಹೇಳ್ತಿರ ಎಂದು ಪ್ರಶ್ನಿಸಿದರು. ಲೂಟಿ ರವಿ ನಿಮ್ಮ ಸಂಸ್ಕಾರ ನಮಗೆ ಗೊತ್ತಿದೆ. ನನಗೆ ನಮ್ಮ ನಾಯಕರು ಸಂಸ್ಕಾರ ಕಲಿಸಿದ್ದಾರೆ. ನಾನು ಕೇಳಿದ್ದು ತಪ್ಪು ಅಂದ್ರೆ ವಿವರಣೆ ಕೊಡಿ. 150 ದಿನ ನರೇಗಾ ಉದ್ಯೋಗ ಕೊಟ್ರಾ ಹೇಳಿ, ಉದ್ಯೊಗ ಸೃಷ್ಟಿ ಮಾಡಿದ್ದೀರ ಹೇಳಿ, ನಾನು ಯುವಕರ ಬಗ್ಗೆ ಕಳಕಳಿಯಿಂದ ಮಾತನಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿಕೆಗೆ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ರು.
ಅಲ್ಲದೆ 10 ವರ್ಷದ ಟ್ರಾಕ್ ರಿಪೋರ್ಟ್ ಕೊಡಿ, ಮೋದಿ ಮೋದಿ ಅಂತ ಹೇಳ್ತಿದ್ದೀರ, ಯುವಕರಿಗೆ ಬುದ್ದಿ ಹೇಳಿದ್ದೇನೆ ತಪ್ಪೇನು ..? ನಾನು ಮಾತನಾಡಿದ ಪದದಲ್ಲಿ ಅಶ್ಲೀಲ ಇದ್ಯಾ?. ನಾನು ಕಾಂಗ್ರೆಸ್ ಪಕ್ಷದವನಾಗಿ ಆಡಿಹೊಗಳಬೇಕಾ..? 2 ಕೋಟಿ ಉದ್ಯೋಗ ಕೊಟ್ಟಿದ್ರೆ ಮೋದಿಗೆ ಜೈ ಅಂತ ಹೇಳ್ತೇನೆ. 400 ಸೀಟು ಬಂದ್ರೆ ಸಂವಿಧಾನ ಬದಲಾವಣೆ ಮಾಡೋದಾಗಿ ಹೇಳಿದ್ರು. ನಮ್ಮ ಸಂವಿಧಾನ ಬಗ್ಗೆ ಕೇಳಿದ್ರೆ ತಪ್ಪೇನು..? ಪಾಠ ಕಲಿಸ್ತಾರೆ ಅಂತ ಬೊಮ್ಮಾಯಿ ಹೇಳ್ತಾರೆ. ಹೌದು ನಿಮಗೆ ಜನ ಪಾಠ ಕಲಿಸಿದ್ದಾರೆ. ನಾವು ಸತ್ಯ ಹೇಳಿದ್ರೆ ನಿಮಗೆ ಉರಿ ಬರುತ್ತಾ? ಮೆಣಸಿನ ಕಾಯಿ ತಿಂದಂತೆ ಆಗುತ್ತಾ? ಎಂದು ಆಕ್ರೋಶ ಹೊರಹಾಕಿದ್ರು.
ನಾನು ಕಪಾಳಕ್ಕೆ ಹೊಡೆಯಿರಿ ಎಂದಿದ್ದು ಯಾರಿಗೆ..? ಸಿಟಿ ರವಿಗೆ ಹೇಳಿದ್ನಾ, ಮೋದಿಗೆ ಹೇಳಿದ್ನಾ..? ಯಾವ ಸ್ಥಿತಿಗತಿಯಲ್ಲಿ ಹೇಳಿದ್ದೇನೆ ಗೋತ್ತಿದ್ಯಾ..? ತಪ್ಪು ಮಾಡಿದ್ರೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದರು. ಸಿಟಿ ರವಿ ಮಾತನಾಡಿದ್ದು ಅಸಂಬದ್ಧ ಅಲ್ವೇ? ನಾವು ಕೆಲಸ ಮಾಡಿದ್ದೇವೆ ಅಂತ ಹೇಳೋಕೆ ಅವರಿಗಿಲ್ಲ. ರೈತರ ಸಾಲ ಮನ್ನಾ ಮಾಡಿದ್ದಾರೆ. ಎಷ್ಟು ನೀರಾವರಿ ಯೋಜನೆ ಕೊಟ್ಟಿದ್ದಾರೆ. ಎಷ್ಟು ವಿಮಾನ ನಿಲ್ದಾಣ ಮಾರಿದ್ದೀವಿ. ಎಷ್ಟು ಸಂಘ ಸಂಸ್ಥೆ ಮಾರಿದ್ದೀವಿ ಅಂತ ಹೇಳಲಿ. ನಾವು ೨ ಕೋಟಿ ಉದ್ಯೋಗ ಕೊಟ್ಟಿಲ್ಲ ಅಂದಿದ್ದೇವೆ. ನೀವು ದಾಖಲೆ ಮೂಲಕ ಮಾಹಿತಿ ಕೊಡಿ ಎಂದರು.
ಅನುರಾಗ್ ಠಾಕೂರ್ ಗುಂಡು ಹೊಡೆಯಿರಿ ಅಂತಾ ಹೇಳಿದ್ರು. ಈ ದೇಶದ ರೈತರಿಗೆ ಗುಂಡು ಹೊಡೆಯಿರಿ ಅಂದಿದ್ರು. ಅದರ ಬಗ್ಗೆ ಮಾತನಾಡಿ, ಯಾಕೆ ಮಾತನಾಡೋಕೆ ಬರೋದಿಲ್ವಾ? ರಾಜ್ಯಕ್ಕೆ ಬರ ಬಂದಿದೆ. ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೇವೆ ಅಂತ ಹೇಳಲಿ. ಇದನ್ನ ಹೇಳೋಕೆ ಅವರಿಗೆ ಯೋಗ್ಯತೆ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ತಂಗಡಗಿ ವಾಗ್ದಾಳಿ ನಡೆಸಿದರು.