ಕ್ರೈಂ ಸ್ಟೋರಿರಾಜ್ಯಸುದ್ದಿ

20ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿನಿ ಸಾವು..

ಪ್ರತಿವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆ ಕೆಲವೊಂದು ಅಹೀತಕರ ಘಟನೆಗಳು ನಡೆಯೋದು ಸಾಮಾನ್ಯ ಸಂಗತಿ ಆಗಿದೆ. ಪರೀಕ್ಷೆಗೆ ಇನ್ನು ಒಂದು ತಿಂಗಳು ಬಾಕಿ ಇರುವಾಗ ಅಂತದ್ದೆ ದುರಂತವೊಂದು ನಡೆದು ಹೋಗಿದೆ. ಬೆಂಗಳೂರಿನ ಕಾಡುಗೋಡಿಯಲ್ಲಿ ಇಂತಹದೇ ಒಂದು ಘನಘೋರ ದುರಂತ ಇಂದು ನಡೆದಿದೆ. ಈ ಬಾಲಕಿಯ ಹೆಸರು ಅವಂತಿಕಾ ಚೌರಾಸಿಯಾ. ಇನ್ನೂ ಕೇವಲ 15 ವರ್ಷ ವಯಸ್ಸು. SSLC ಓದುತ್ತಿರುವ ಅವಂತಿಕಾಗೆ ಅವರ ತಾಯಿ ಪರೀಕ್ಷೆ ಹತ್ತಿರ ಬರುತ್ತಾ ಇದೆ. ಮೊಬೈಲ್ ಬಿಟ್ಟು ಪರೀಕ್ಷೆಗೆ ಓದು ಎಂದು ಬೈದಿದ್ದಾರೆ.

ಯಾವಾಗಲೂ  ಮೊಬೈಲ್‌ನಲ್ಲಿ ಇರ್ತಿಯಾ ಅಂತ ಅಮ್ಮ ಬೈದಿದ್ದಕ್ಕೆ ಅವಂತಿಕಾ ಬೇಸರಗೊಂಡು ದುಡುಕಿದ್ದಾರೆ. ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ 15 ವರ್ಷದ ಅವಂತಿಕಾ ಚೌರಾಸಿಯಾ 20ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ಅಪಾರ್ಟ್ ಮೆಂಟ್‌ ಮೇಲಿಂದ ಜಿಗಿದು ಬಾಲಕಿ ಜೀವ ಬಿಟ್ಟಿದ್ದಾಳೆ. ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments (0)

Your email address will not be published. Required fields are marked *

Back to top button