Top Newsವಿಶೇಷಶಿಕ್ಷಣ

ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಕತಿಕ್ಯಾತನಹಳ್ಳಿಯ ಪ್ರಗತಿ ಉತ್ತಮ ಸಾಧನೆ

ಎಸ್​​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಪಾವಗಡ ತಾಲೂಕು ವೈಎನ್ ಹೊಸಕೋಟೆ ಹೋಬಳಿ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕತಿಕ್ಯಾತನಹಳ್ಳಿ ಗ್ರಾಮದ ಬಾಲಕಿ ಕೆವಿ ಪ್ರಗತಿ ಉತ್ತಮ ಸಾಧನೆ ಮಾಡಿದ್ದಾರೆ.

ನಿಡಗಲ್ ಹೋಬಳಿ ವ್ಯಾಪ್ತಿಯ ಕೊಡಿಗೆಹಳ್ಳಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಕೆವಿ ಪ್ರಗತಿ 625 ಅಂಕಗಳಿಗೆ 606 ಅಂಕ ಗಳಿಸಿ ತಮ್ಮ ಶಾಲೆ, ಗ್ರಾಮ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಕತಿಕ್ಯಾತನಹಳ್ಳಿಯ ವೀರಣ್ಣ ಮತ್ತು ಸುಶೀಲಮ್ಮ ಅವರ ಪುತ್ರಿ ಕೆವಿ ಪ್ರಗತಿ, ಕನ್ನಡದಲ್ಲಿ 113, ಇಂಗ್ಲೀಷ್​ ನಲ್ಲಿ 100ಕ್ಕೆ 100, ಹಿಂದಿಯಲ್ಲಿ 99, ಗಣಿತದಲ್ಲಿ 98, ಸೈನ್ಸ್ ನಲ್ಲಿ 98, ಸಮಾಜದಲ್ಲಿ 98 ಅಂಕ ಗಳಿಸಿದ್ದಾರೆ.

ಗ್ರಾಮೀಣ ಪ್ರತಿಭೆ ಕೆವಿ ಪ್ರಗತಿ ನಿವಾಸದಲ್ಲಿ ಇಂದು ಸಂಭ್ರಮ ಮನೆ ಮಾಡಿತ್ತು. ಅಪ್ಪ ವೀರಣ್ಣ-ತಾಯಿ ಸುಶೀಲಮ್ಮ ಖುಷಿಗೆ ಪಾರವೇ ಇಲ್ಲವಾಗಿತ್ತು. ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

Comments (0)

Your email address will not be published. Required fields are marked *

Back to top button