ಬೆಂಗಳೂರು: ಮೇ-8 ನೇ ತಾರೀಖು ಎಸ್ಎಸ್ಎಲ್ಸಿ ರಿಸಲ್ಟ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಸುಮಾರು 8.69 ಲಕ್ಷ ವಿದ್ಯಾರ್ಥಿಗಳು ಭವಿಷ್ಯ ಮೇ-8 ರಂದು ಘೋಷಣೆ ಸಾಧ್ಯತೆ ಇದೆ. 4,41,910 ಬಾಲಕರು ಮತ್ತು 4,28,058 ಬಾಲಕಿಯರು ಪರೀಕ್ಷೆಯನ್ನು ಎದುರಿಸಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಎಸ್ಎಲ್ಸಿ ರಿಸಲ್ಡ್ ಬಿಡುಗಡೆಗೆ ಸನ್ನದ್ದವಾಗಿದ್ದಾರೆ. ಪರೀಕ್ಷಾ ಮಂಡಳಿ ಏಪ್ರಿಲ್10 ರಂದು ದ್ವಿತೀಯ ಪಿಯು ರಿಸಲ್ಟ್ ಬಿಡುಗಡೆ ಮಾಡಿತ್ತು.
ಇದೀಗ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆ ಮಂಡಳಿ ಸಜ್ಜು ಮಾಡ್ತಾ ಇದೆ. ಏಪ್ರಿಲ್ 15 ರಂದು ಎಸ್ಎಸ್ಎಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದ್ದೂ, ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಎಸ್ಎಸ್ಎಲ್ಸಿ ರಿಸಲ್ಡ್ ಗಾಗಿ ಕಾಯುತ್ತಿದ್ದಾರೆ. ರಿಸಲ್ಟ್ ನ್ನ ಸರ್ಕಾರಿ ಅಧಿಕೃತ ವೆಬ್‌ಸೈಟ್ – kseeb.kar.nic.in ಮತ್ತು karresults.nic.in ನಲ್ಲಿ ಬಿಡುಗಡೆ ಮಾಡಲು ಮಂಡಳಿ ನಿರ್ಧಾರ ಮಾಡಿದೆ ಎನ್ನಲಾಗ್ತಾ ಇದೆ.