Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsಶ್ರೀಲಂಕಾ ಅಧ್ಯಕ್ಷರಾಗುವತ್ತ ದಿಸ್ಸಾನಾಯಕೆ ದಾಪುಗಾಲು-ಎಡಪಂಥೀಯ ಕುಮಾರ ಡಿಸಾನಾಯಕೆ ಪದ ಗ್ರಹಣ

ಶ್ರೀಲಂಕಾ ಅಧ್ಯಕ್ಷರಾಗುವತ್ತ ದಿಸ್ಸಾನಾಯಕೆ ದಾಪುಗಾಲು-ಎಡಪಂಥೀಯ ಕುಮಾರ ಡಿಸಾನಾಯಕೆ ಪದ ಗ್ರಹಣ

ಕೊಲೊಂಬೊ: ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಅನುರ ಕುಮಾರ ಡಿಸಾನಾಯಕೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದ ಆರ್ಥಿಕತೆ ಬಲಪಡಿಸುವ ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕುವ ಭರವಸೆ ನಡುವೆ

56ರ ಹರೆಯದ ಡಿಸಾನಾಯಕೆ ರಾಷ್ಟ್ರಪತಿಗಳ ಕಾರ್ಯದರ್ಶಿ ಕಚೇರಿಯಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ಶನಿವಾರ ನಡೆದ ಚುನಾವಣೆಯಲ್ಲಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್ ಪೀಪಲ್ಸ್ ಪವರ್ (NPP) ನಾಯಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (SJB) ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು.

ದೇಶ ಆರ್ಥಿಕ ಬಿಕ್ಕಟ್ಟು ಎದುರಿಸಿದ ನಂತರ 2022 ರಲ್ಲಿ ಸಾಮೂಹಿಕ ಪ್ರತಿಭಟನೆಯಿಂದ ಗೋಟಾಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸಿದ ನಂತರ ನಡೆದ ಮೊದಲ ಚುನಾವಣೆಯಾಗಿದೆ. ಪ್ರಮಾಣ ವಚನ ಸ್ವೀಕಾರ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಡಿಸಾನಾಯಕೆ, ಜನಾದೇಶವನ್ನು ಗೌರವಿಸಿದ್ದಕ್ಕಾಗಿ ಮತ್ತು ಅಧಿಕಾರದ ಶಾಂತಿಯುತ ಹಸ್ತಾಂತರವನ್ನು ಸುಗಮಗೊಳಿಸಿದ್ದಕ್ಕಾಗಿ ನಿರ್ಗಮಿತ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಧನ್ಯವಾದ ಸಲ್ಲಿಸಿದರು.

ಅಧ್ಯಕ್ಷೀಯ ಚುನಾವಣೆಯ ನಂತರ ದೇಶದಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆಭಾಗವಾಗಿ ಪ್ರಧಾನಿ ದಿನೇಶ್ ಗುಣವರ್ಧನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ಆರ್ಥಿಕ ಸಂಕಷ್ಟದ ನಡುವೆ ನಡೆದ ಚುನಾವಣೆಯಲ್ಲಿ ಭ್ರಷ್ಟಚಾರ ನಿರ್ಮೂಲನೆ, ಆರ್ಥಿಕ ಪುನಶ್ಚೇತನದ ಭರವಸೆ ನೀಡಿದ್ದ ನ್ಯಾಷನಲ್ ಪೀಪಲ್ಸ್ ಪವರ್ ಪಕ್ಷದ ನಾಯಕ ದಿಸ್ಸಾನಾಯಕೆ ಅವರು ಎರಡನೇ ಸುತ್ತಿನ ಮತ ಎಣಿಕೆಯಲ್ಲಿ 56 ಲಕ್ಷ ಮತ ಪಡೆಯುವ ಮೂಲಕ ಸಿಂಹಳ ದೇಶದ 10ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಸಜಿತ್ ಪ್ರೇಮದಾಸಾ ಅವರು ಶೇ 32.8 ರಷ್ಟು ಮತ ಪಡೆದುಕೊಂಡರು. ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಕೇವಲ ಶೆ.17ರಷ್ಟು ಮತ ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದರು.

ಶನಿವಾರ ನಡೆದ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯು ಶೇಕಡಾ 50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸದ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಮತ ಎಣಿಕೆಗೆ ಚುನಾವಣಾ ಆಯೋಗ ಭಾನುವಾರ ಆದೇಶ ನೀಡಿತ್ತು. ದಿಸಾನಾಯಕ ಅವರು 105,264 ಪ್ರಾಶಸ್ತ್ಯಗಳೊಂದಿಗೆ 5.74 ಮಿಲಿಯನ್ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರೇಮದಾಸ ಅವರು 167,867 ಪ್ರಾಶಸ್ತ್ಯಗಳೊಂದಿಗೆ 4.53 ಮಿಲಿಯನ್ ಮತಗಳನ್ನು ಪಡೆದರು.

ಪ್ರಾಶಸ್ತ್ಯ ಮತಗಳೇ ನಿರ್ಣಾಯಕ
ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮಾಕ್ರ್ಸ್​ವಾದಿ ನಾಯಕ ಅನುರ ಕುಮಾರ ಡಿಸ್ಸಾನಾಯಕ ಹಾಗೂ ಪ್ರತಿಪಕ್ಷ ನಾಯಕ ಸಜಿತ್ ಪ್ರೇಮದಾಸ ಗರಿಷ್ಠ ಮತ ಗಳಿಸಿದರು. ಶೇ.17ರಷ್ಟು ಮತ ಪಡೆದ ವಿಕ್ರಮಸಿಂಘೆ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಮೊದಲ ಸುತ್ತಿನಲ್ಲಿ ಇಬ್ಬರು ಅಭ್ಯರ್ಥಿಗಳು ಶೇ.50ಕ್ಕಿಂತ ಹೆಚ್ಚು ಮತ ಪಡೆಯಲು ಸಾಧ್ಯವಾಗಲಿಲ್ಲ 2ನೇ ಸುತ್ತಿನ ಮತ ಎಣಿಕೆಯಲ್ಲಿ ಪ್ರಾಶಸ್ತ್ಯದ ಮತಗಳ ಮೂಲಕ ಮುನ್ನಡೆ ಹೆಚ್ಚಿಸಿಕೊಂಡ ಅನುರ ಕುಮಾರ ದಿಸ್ಸಾನಾಯಕೆ ಗೆಲುವಿನ ದಡ ಸೇರಿದರು.

ಭ್ರಷ್ಟಾಚಾರ, ಸ್ವಜನಪಕ್ಷಪಾತ ನಿರ್ಧಾರಗಳಿಂದ 2022ರಲ್ಲಿ ಶ್ರೀಲಂಕಾ ತೀವ್ರ ಆರ್ಥಿಕ ಸಣಕಷ್ಟಕ್ಕೆ ಸಿಲುಕಿತು. ಅಂದಿನ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಹೊರಹಾಕಲು ದೇಶದಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿದ್ದವು. ಹೊಸ ಅಧ್ಯಕ್ಷರ ಆಯ್ಕೆಗೆ ಶನಿವಾರ ಮತದಾನ ನಡೆಯಿತು. ಶ್ರೀಲಂಕಾ ರಾಜಕೀಯ ಚರಿತ್ರೆಯಲ್ಲಿ ಮೊದಲ ಬಾರಿಗೆ ಎರಡನೇ ಸುತ್ತಿನಲ್ಲಿ ಪ್ರಾಶಸ್ತ್ಯದ ಮತಗಳ ಮೂಲಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments