ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜುಲೈ 28 ರಂದು ಭಾರತದ ಕ್ರೀಡಾಪಟುಗಳು ಶೂಟಿಂಗ್, ಬ್ಯಾಡ್ಮಿಂಟನ್, ರೋಯಿಂಗ್, ಟೇಬಲ್ ಟೆನ್ನಿಸ್, ಬಾಕ್ಸಿಂಗ್, ಈಜು ಮತ್ತು ಬಿಲ್ಲುಗಾರಿಕೆಯಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ಬಹುತೇಕ ಸ್ಪರ್ಧೆಗಳು ಅರ್ಹತಾ ಸುತ್ತಿನಲ್ಲಿ ನಡೆಯುತ್ತಿರುವುದರಿಂದ ಮುಂದಿನ ಹಂತಕ್ಕೇರಲು ಉತ್ತಮ ಪ್ರದರ್ಶನ ನೀಡಲೇಬೇಕಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತೀಯರಿಂದ ಅದ್ಭುತ ಪ್ರದರ್ಶನವನ್ನು ನಿರೀಕ್ಷಿಸಬಹುದು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶನಿವಾರ ನಡೆದ ಸ್ಪರ್ಧೆಗಳಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ದಿನ ಭಾರತ ತಂಡ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರೂ ಬ್ಯಾಡ್ಮಿಂಟನ್, ಶೂಟಿಂಗ್ ಹಾಗೂ ಹಾಕಿಯಲ್ಲಿ ತೋರಿದ ಪ್ರದರ್ಶನ ಕ್ರೀಡಾಳುಗಳ ನೈತಿಕ ಸ್ಥೈರ್ಯ ಹೆಚ್ಚಿಸಿದೆ. ಅಲ್ಲದೆ ಮನು ಭಾಕರ್ ಶೂಟಿಂಗ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರೆ, ಅನೇಕ ಕ್ರೀಡಾಪಟುಗಳು ಮುಂದಿನ ಸುತ್ತಿಗೆ ತಲುಪಿದ್ದಾರೆ. ಇದೀಗ ಭಾರತೀಯ ಕ್ರೀಡಾಪಟುಗಳು ದ್ವಿತೀಯ ದಿನವೂ ಈ ಗೆಲುವಿನ ಅಭಿಯಾನವನ್ನು ಮುಂದುವರೆಸುವ ಇರಾದೆಯಲ್ಲಿದ್ದಾರೆ
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com