ಬೆಂಗಳೂರು : ಬಿಗ್ ಬಾಸ್ ಸೀಸನ್ 10ರ ಸ್ಪರ್ದಿ ತನಿಷಾ ಕುಪ್ಪಂಡ ಬಿಗ್ ಬಾಸ್ ಮನೆಯಿಂದ ಆಚೆ ಬಂದ್ಮೇಲೆ ತಮ್ಮ ಪರ್ಸನಲ್ ಲೈಫಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತನಿಷಾ ಅಭಿಮಾನಿಗಳ ಪಾಲಿಗೆ ಬೆಂಕಿ ಎಂದೇ ಮನಸ್ಸಿಗೆ ಹತ್ತಿರವಾಗಿ ಬಿಟ್ಟಿದ್ದಾರೆ. ಕಾರ್ತಿಕ್ ಹಾಗೂ ತನಿಷಾ ಫ್ರೆಂಡ್​ಶಿಪ್ ಮನೆಯಿಂದ ಆಚೆ ಕೂಡ ಇನ್ನೂ ಸ್ಟ್ರಾಂಗ್ ಆಗಿ ಇದ್ದು ಆಗಾಗ ಪ್ರೊಫೆಷನಲ್ ಕೆಲಸದ ವಿಚಾರಗಳಲ್ಲಿ ಭೇಟಿ ಆಗುತ್ತಲೆ ಇರುತ್ತಾರೆ.

ಸದ್ಯ ತನಿಷಾ ಕುಪ್ಪಂಡಾ ಅವರು ಟ್ರೆಡಿಷನಲ್ ಲುಕ್​ನಲ್ಲಿ ಮಸ್ತ್ ಫೋಟೋಶೂಟ್ ಮಾಡಿಸಿಕೊಂಡೊದ್ದಾರೆ. ಆ ಫೋಟೋದಲ್ಲಿ ತನಿಷಾ ಕುಪ್ಪಂಡ ಮೀರ ಮೀರ ಮಿಂಚಿದ್ದಾರೆ. ಹೌದು ಲಂಗ ದಾವಣಿ ಹಾಕಿ ಕ್ಯಾಮೆರಾಗಿ ಸಖತ್ ಪೋಸ್ ಕೊಟ್ಟಿದ್ದಾರೆ. ಹಳದಿ , ಹಸಿರು ಬಣ್ಣದ ಬಟ್ಟೆಗೆ ಪಿಂಕ್ ಕಲರ್ ದುಪ್ಪಟ್ಟ ಹಾಕಿ ಸ್ಟೈಲ್ ಮಾಡಿ ಕ್ಯಾಮರಾನೇ ನಾಚಿ ನೀರಾಗುವಂತೆ ಪೋಸ್ ನೀಡಿದ್ದಾರೆ.

ಇದರ ಜೊತೆಗೆ ನವಿಲಿನ ಕಾಸ್ಟ್ಯೂಮ್​ನಲ್ಲಿ ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ, ತನಿಷಾ ಅವರ ಬಗ್ಗೆ ಮತ್ತೊಂದು ವಿಷಯ ಏನಪ್ಪ ಅಂದ್ರೆ , ಕಾರ್ತಿಕ್ ಮುಂದಿನ ಸಿನಿಮಾವನ್ನ ತನಿಷಾ ಕುಪ್ಪಂಡ ನಿರ್ಮಾಣ ಮಾಡಲಿದ್ದಾರೆ ಅಂತ ಗಾಳಿ ಸುದ್ದಿ ಇದೆ. ಇದೇನಾದ್ರೂ ನಿಜಾನೇ ಆದ್ರೆ , ಕಾರ್ತಿಕ್ ಹಾಗೂ ತನಿಷಾ ಬಾಡಿಂಗ್ ಮತ್ತಷ್ಟು ಗಟ್ಟಿಯಾಗಲಿದೆ.

ಸದ್ಯ ಹೊಸ ಫೋಟೋ ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಫೋಟೋ ನೋಡಿದ ನೆಟ್ಟಿಗರು ನಿಜವಾಗಲೂ ನೀವೂ ಬೆಂಕಿನೇ , ಅದ್ಭುತವಾದ ಫೋಟೋ , ಬ್ಯೂಟೊಫುಲ್ ಆಗಿ ಕಾಣುತ್ತಿದ್ದೀರಿ, ನಮ್ಮ ಬೆಂಕಿ ನವಿಲು ಅಂತಾ ಕಾಮೆಂಟ್ ಮಾಡುತ್ತಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights