ಬೆಂಗಳೂರು: ಲೋಕಸಭಾ ಚುನಾವಣೆ ಅಂತಿಮ ಹಂತದಲ್ಲಿದ್ದು ಮತದಾನಕ್ಕೆ ಕ್ಷಣಗಣನೆ ನಡೆಯುತ್ತಿದ್ದಂತೆಯೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಭರ್ಜರಿ ಬೆಳವಣಿಗೆಗಳು ನಡೆದಿವೆ.
ಸಾರಿಗೆ ಸಚಿವರಾಗಿರುವ ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ ಹುರಿಯಾಳಾಗಿ ಕಣದಲ್ಲಿದ್ದು, ವಿವಿಧ ಸಂಘಸಂಸ್ಥೆಗಳು ಅವರ ಬೆಂಬಲಕ್ಕೆ ನಿಂತಿವೆ.
ಕೆಲವು ದಿನಗಳಲ್ಲಿ ಹಲವಾರು ಸಂಘಟನೆಗಳು-ಸಮುದಾಯಗಳು ಸೌಮ್ಯ ರೆಡ್ಡಿ ಗೆಲುವಿಗಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಇದೀಗ ಹೊಟೇಲ್ ಮಾಲೀಕರು ಸೇರಿದಂತೆ ಬೆಂಗಳೂರು ಮಾಲೀಕರ ಸಂಘ ಕೂಡಾ ಸೌಮ್ಯ ರೆಡ್ಡಿ ಅವರಿಗೆ ಬೆಂಬಲ ಘೋಷಿಸಿದೆ.