ಕಠ್ಮಂಡು: ನೇಪಾಳದಲ್ಲಿ ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ಆ್ಯಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದ್ದು, ನೇಪಾಳದ ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ಧಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದು, ಪೊಲೀಸರು ನಡೆಸಿದ ಗುಂಡಿನ ಗುಂಡಿನ ದಾಳಿಯಲ್ಲಿ ಓರ್ವ ಯುವಕ ಸಾವನ್ನಪ್ಪಿದ್ಧಾನೆ.. 80 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವು ಜನರನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಇನ್ನು ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗೋ ಸಾಧ್ಯತೆ ಇದೆ.
ಈಗೀನ ಕಾಲದಲ್ಲಿ ಜನರಿಗೆ ಸಾಮಾಜಿಕ ಮಾಧ್ಯಮಗಳು ಇಲ್ಲ ಅಂದರೆ ಯಾವುದೇ ಕೆಲಸಗಳು ನಡೆಯಲ್ಲ ಎಂಬ ಮನಸ್ಥಿತಿ ಇದೆ. ಕೆಲವೊತ್ತು ನೆಟ್ವರ್ಕ್ ಸಿಗದಿದ್ರೆ ಸಾಕು ಅದು ಏನನ್ನೋ ಕಳೆದುಕೊಂಡ ರೀತಿಯಲ್ಲಿರುತ್ತಾರೆ. ಆದ್ರೆ ಈ ನಡುವೆ ನೇಪಾಳ ಸರ್ಕಾರ ಬರೋಬ್ಬರಿ 24 ಸಮಾಜಿಕ ಮಾಧ್ಯಮಗಳನ್ನ ಬ್ಯಾನ್ ಮಾಡಿದ್ದರಿಂದ ಯುವಜನರು ಕಂಗಾಲಾಗಿ ಹೋಗಿದ್ದಾರೆ.
ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ನೋಂದಣಿಗೆ ಆಗಸ್ಟ್ 28 ರಂದು 7 ದಿನಗಳ ಗಡುವು ನೀಡಿತ್ತು. ಆದ್ರೆ ಸಮಯ ಮುಕ್ತಾಯಗೊಂಡಿದ್ದರೂ ಮೆಟಾ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್, ರೆಡಿಟ್ ಮತ್ತು ಲಿಂಕ್ಡ್‌ಇನ್‌ನಂತಹ ಯಾವುದೇ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಅರ್ಜಿಗಳನ್ನು ಸಲ್ಲಿಸಿಲ್ಲ.
ಈ ಹಿನ್ನಲೆ ನೇಪಾಳ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕಳೆದ ವಾರ 24 ಸಾಮಾಜಿಕ ಜಾಲತಾಣವನ್ನ ಬ್ಯಾನ್ ಮಾಡಿತ್ತು. ಇದಕ್ಕಾಗಿ ಇಂದು ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದು, ಪ್ರತಿಭಟೆಯನ್ನ ತಡೆಯಲು ಪೋಲಿಸರ ಹರಸಾಹಸ ಪಡುವಂತಾಗಿದೆ.