ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಕ್ಯಾಪ್ಟನ್ ಸ್ಮೃತಿ ಮಂದಾನ ವಿವಾಹ ಸಂಭ್ರಮದಲ್ಲಿದ್ದಾರೆ.. ಪ್ರಿಯಕರ ಪಲಾಷ್ ಮುಚ್ಚಲ್ ಜೊತೆಗೆ ಹಸೆಮಣೆ ಏರೋಕೆ ಸಾಂಗ್ಲಿ ಸುಂದರಿ ಸಜ್ಜಾಗಿದ್ದು, ನಾಳೆ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಂದಾನ ಅವರ ಸಹ ಆಟಗಾರ್ತಿಯರು ಭಾಗಿಯಾಗಿ ಭರ್ಜರಿ ಸ್ಟೇಪ್ ಹಾಕಿದ್ದಾರೆ..

ಭಾರತ ಮಹಿಳಾ ತಂಡದ ಆಟಗಾರ್ತಿಯರಾದ ಶೆಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ರಾಡ್ರಿಗಸ್ ಹಳದಿ ಶಾಸ್ತ್ರದಲ್ಲಿ ಭಾಗಿಯಾಗಿ ನೃತ್ಯ ಮಾಡಿದ್ದಾರೆ.

ವಿವಾಹಕ್ಕೂ ಮುನ್ನ ಪ್ರೇಯಸಿ ಸ್ಮೃತಿ ಮಂದಾನಗೆ ಪಲಾಶ್ ಮುಚ್ಚಲ್ ಸರ್ಪ್ರೈಸ್ ಪ್ರಪೋಸ್ ಮಾಡಿದ್ದಾರೆ. ಮಂದಾನಾ ಕಣ್ಣಿಗೆ ಬಟ್ಟೆ ಕಟ್ಟಿ ನೆಚ್ಚಿನ ಕ್ರೀಡಾಂಗಣ ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂಗೆ ಕರೆ ತಂದು ಪಲಾಶ್ ಮುಚ್ಚಲ್ ಪ್ರಪೋಸ್ ಮಾಡಿದ್ದಾರೆ. ಮೈದಾನದ ಮಧ್ಯೆ ಮಂಡಿಯೂರಿ ರಿಂಗ್ ನೀಡಿ ಪ್ರಪೋಸ್ ಮಾಡಿದ್ದಾರೆ. ಸರ್ಪ್ರೈಸ್ ಪ್ರಪೋಸ್ಗೆ ಮಂದಾನ ಭಾವುಕರಾಗಿದ್ದಾರೆ.

ಬಾಲಿವುಡ್ ಮತ್ತು ಕ್ರಿಕೆಟ್ಗೂ ದೀರ್ಘಕಾಲದ ಸಂಬಂಧವಿದೆ. ಬಾಲಿವುಡ್ ನಟಿಮಣಿಯರನ್ನ ವರಿಸಿದ ಹಲವು ಟೀಮ್ ಇಂಡಿಯಾ ಕ್ರಿಕೆಟಿಗರಿದ್ದಾರೆ. ಸ್ಮೃತಿ ಮಂದಾನ ವಿಚಾರದಲ್ಲೂ ಇದೇ ರಿಪಿಟ್ ಆಗ್ತಿದೆ. ಮಹಾರಾಷ್ಟ್ರದ ಸಾಂಗ್ಲಿಯ ಸುಂದರಿ ಸ್ಮೃತಿ ಮಂದಾನ, ಇಂದೋರ್ ಸೊಸೆಯಾಗಲಿದ್ದಾರೆ. ಸ್ಮೃತಿ ವರಿಸ್ತಾ ಇರೋ ಪಲಾಷ್ ಇಂದೋರ್ನವರು. ಬಾಲಿವುಡ್ನ ಗಾಯಕ ಹಾಗೂ ಮ್ಯೂಸಿಕ್ ಡೈರೆಕ್ಟರ್.

ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮಂದಾನ ಕಳೆದ ಕೆಲ ವರ್ಷಗಳಿಂದಲೇ ಇವರಿಬ್ಬರು ಒಟ್ಟಾಗಿ ಓಡಾಡ್ತಿದ್ರು. ಹಲವು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ರು. ಇಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನ ಹಂಚಿಕೊಳ್ತಿದ್ರು. ಪಂದ್ಯಗಳ ವೇಳೆ ಸ್ಟ್ಯಾಂಡ್ನಲ್ಲಿ ಕುಳಿತು ಪಲಾಶ್ ಸ್ಮೃತಿಗೆ ಚಿಯರ್ ಮಾಡಿದ್ದೂ ಇದೆ. ಆಗಲೇ ಇಬ್ಬರೂ ಡೇಟಿಂಗ್ ನಡೆಸ್ತಿರೋ ಗುಸುಗುಸು ಬಾಲಿವುಡ್ ಹಾಗೂ ಕ್ರಿಕೆಟ್ ವಲಯದಲ್ಲಿ ಹರಿದಾಡಿತ್ತು. ಈಗ ಡೇಟಿಂಗ್ ಗಾಸಿಪ್ಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಗಾಯಕ ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂದಾನ ವಿವಾಹ ಕಾರ್ಯಕ್ರಮ ನವೆಂಬರ್ 23ರಂದು ನಡೆಯಲಿದೆ.


