ವಿಜಯಪುರ; ರೈತರ ಕುರಿತಾದ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ವಿಜಯಪುರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಇದು ದುರ್ಧೈವ, ಯಾಕಂದ್ರೆ ಶಿವಾನಂದ ಪಾಟೀಲ್ ರೈತರ ಆತ್ಮಹತ್ಯೆ ಬಗ್ಗೆನೂ ಮಾತನಾಡಿದ್ರು ಈ ಹಿಂದೆ. ಇವತ್ತು ಬರಗಾಲವನ್ನ ರೈತರು ಬಯಸುತ್ತಾರೆ ಅಂದ್ರೆ ಇದನ್ನ ಯಾವ ರೀತಿ ಖಂಡನೆ ಮಾಡಬೇಕು ಗೊತ್ತಾಗ್ತಿಲ್ಲ.
ಈ ರೀತಿ ಒಬ್ಬ ಜವಾಬ್ದಾರಿಯುತ ಮಂತ್ರಿಗಳು ಅದರಲ್ಲಿಯೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ಅವರು ಮತ್ತು ರೈತರ ಬಗ್ಗೆ ಇಷ್ಟು ಹಗುರವಾಗಿ ಯಾರೂ, ದೇಶದಲ್ಲಿರುವಂತಹ ಅನ್ನದಾತ ಬರಗಾಲ ಬರಲಿ, ಎಂದು ಯಾರೂ ಬಯಸುವುದಿಲ್ಲ. ಯಾರು ಬಯಸುತ್ತಾರೆ ಅಂದ್ರೆ ಅವರೊಬ್ಬರೆ ಬಯಸುತ್ತಿದ್ದಾರೆ. ಬರಗಾಲ ಬರಲಿ ಎಂದು ಕೆಲವು ಮಂದಿ ಯಾಕೆ ಬಯಸುತ್ತಾರೆ ಅಂದ್ರೆ ಕೆಲವರಿಗೆ ಬ್ಯಾಂಕಿನ ಸಾಲ ಮನ್ನಾ ಆಗ್ತದ.ಕೆಲವೊಂದು ಏನು ತಾವೇ ತೆಗೆದುಕೊಂಡು ಮನ್ನಾ ಆಗಿದ್ದನ್ನ ತಾವು ಮನ್ನಾ ಮಾಡ್ಕೋಳ್ಳಿಕ್ಕ ಅನೂಕೂಲ ಆಗುತ್ತದೆ.
ಅದಕ್ಕೆ ಬರಗಾಲ ಬಯಸುವವರು ಅವರು ಆದರೆ ರೈತರಲ್ಲ. ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಶಿವಾನಂದ ಪಾಟೀಲರಿಗೆ ತಿರುಗೇಟು ನೀಡಿದ್ದಾರೆ. ರೈತರ ಬಗ್ಗೆ ಗೌರವ ಇರುವವರು ಯಾರೂ ಕೂಡ ಈ ರೀತಿ ಮಾತಾನಾಡಲ್ಲ ಹೀಗೆಲ್ಲಾ ಹೇಳಿಕೆ ನೀಡುವವರಿಗೆ ರೈತರ ಬಗ್ಗೆ ಗೌರವವಿದೆಯೋ ಅಥವಾ ಏನಿದೆ ಅನ್ನೋದನ್ನ ನಾಡಿನ ಜನ, ಮುಖ್ಯಮಂತ್ರಿಗಳು ಇಂತಹ ಸಚಿವರಿಗೆ ಕರೆದು ಎಚ್ಚರಿಕೆ ಕೊಡಬೇಕು ಈ ರೀತಿ ಹೇಳಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳಬೇಕು. ಬಹುಶ್ಹ ಅವರು ಸಿದ್ಧರಾಮಯ್ಯನವರ ಕಂಟ್ರೋಲಿನಲ್ಲಿ ಅವರು ಇಲ್ಲ. ಅವರು ಡಿ.ಕೆ.ಶಿವಕುಮಾರ್ ಅವರ ಕಂಟ್ರೋಲಿನಲ್ಲಿ ಇದ್ದಾರೆಂದು ಎಂದರು.
ಇನ್ನು ಸಿದ್ದು ಹಾಗೂ ಡಿಕೆಶಿ ಬಣದ ಬಗ್ಗೆ ಮಾತಾನಾಡಿರುವ ಯತ್ನಾಳ್, ಸರಕಾರದಲ್ಲಿ ಎರಡು ಗುಂಪು ಇದ್ದಾವೆ. ಒಂದು ಸಿದ್ಧರಾಮಯ್ಯನವರದು ಇನ್ನೊಂದು ಡಿ.ಕೆ.ಶಿವಕುಮಾರ್‌ದು.ಎಂ.ಬಿ.ಪಾಟೀಲರು ಸಿದ್ಧರಾಮಯ್ಯ ಟೀಮ್.ಶಿವಾನಂದ ಪಾಟೀಲರು ಡಿ.ಕೆ.ಶಿವಕುಮಾರ್ ಟೀಮ್. ಇವರಿಗೆ ಅವರು ತೆಗೆಯೋದು ಆಗೋದಿಲ್ಲ, ಅವರಿಗೆ ಇವರು ತೆಗೆಯೋದು ಆಗೋದಿಲ್ಲ ಇಬ್ಬರದು ಒಂದೇನು ಜಗಳವಿದೆಂದು ಸಿದ್ದು ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.