ಚಿತ್ರದುರ್ಗ:ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಈ ಕೂಡಲೇ ನಿವೃತ್ತಿಯಾಗಿ ಎರಡೂ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿದೆ. ಭಾನುವಾರ ನಡೆದ ಅಖಿತ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷತೆ ವಹಿಸಿದ್ದ ಶಾಮನೂರು ಶಿವಶಂಕರಪ್ಪ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ 25 ಸದಸ್ಯರ ನಿಯೋಗ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಭೇಟಿಮಾಡಿ ನಿರ್ಣಯವನ್ನು ತಿಳಿಸಲು ತೀರ್ಮಾನಿಸಿದ್ದು, ಅವರು ಒಪ್ಪಿದರೆ ಒಳ್ಳೆಯದು ಇಲ್ಲವಾದರೆ ಮತ್ತೊಂದು ಸಭೆ ಮಾಡೋಣವೆಂದು ಹೇಳಿದ್ದಾರೆ.