ಬೆಳಗಾವಿ ಅಧಿವೇಶನದಲ್ಲಿ ಸಚಿವರು , ಶಾಸಕರ OSD ಗಳು, PA ಗಳು ಹಾಗೂ ಸಹಾಯಕರ ಸಂಕಷ್ಟ ಹೇಳತೀರದ್ದಾಗಿದೆ.ಶಾಸಕರಿಗೆ ಹಾಗೂ ಸಚಿವರಿಗೆ ಕ್ಷಣಕ್ಷಣಕ್ಕೆ ನೆರವು ಒದಗಿಸಬೇಕಾದ OSD ಗಳು, PA ಗಳಿಗೆ ಲಾಂಜ್ ಹತ್ತಿರ ಕನಿಷ್ಠ ಆಸನ ವ್ಯವಸ್ಥೆಯನ್ನೂ ಮಾಡಲಾಗಿಲ್ಲ.. ವಿಧಾನಸಭೆ ಹಾಗೂ ವಿಧಾನ ಪರಿಷತ್ ಮೊಗಸಾಲೆಗಳ ಸಮೀಪ ಇವರಿಗೆ ಪ್ರವೇಶವೇ ಇಲ್ಲದಂತೆ ಮಾಡಲಾಗಿದೆ.ನಿಮಿಷ ನಿಮಿಷಕ್ಕೂ ಶಾಸಕರು ಸಚಿವರಿಂದ ಕರೆ ಬರುತ್ತದೆ ಕೂಡಲೇ ಧಾವಿಸಿ ಅವರಿಗೆ ಬೇಕಾದ ಮಾಹಿತಿ , ದಾಖಲೆ ತಲುಪಿಸಬೇಕು. ಆದರೆ ಮಾರ್ಷಲ್ಗಳು . ನಿಮಗೆ ಎಂಟ್ರಿ ಇಲ್ಲ ಎಂದು ದೂರ ತಳ್ಳುತ್ತಿದ್ದಾರೆ. ಹೀಗಾಗಿ ಸಚಿವರು , ಶಾಸಕರ OSD ಗಳು, PA ಗಳು ತಮ್ಮ ಜವಾಬ್ದಾರಿ ನಿರ್ವಹಿಸಲಾಗದೆ ಕಂಗಾಲಾಗಿದ್ದಾರೆ. ಈ ಕುರಿತು ಹೆಸರು ಹೇಳಲು ಇಚ್ಛಿಸದ ಹಲವು ನೌಕರರು ಫ್ರೀಡಂ ಟಿವಿಗೆ ಕರೆ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಭಾಧ್ಯಕ್ಷರು ಹಾಗೂ ಸಭಾಪತಿಗಳ ಗಮನ ಸೆಳೆದು ಸರ್ಕಾರಿ ಸೇವೆ ಸಲ್ಲಿಸುತ್ತಿರುವ ನಮಗೆ ಕನಿಷ್ಠ ಆಸನ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಅವರು ಮನವಿ ಮಾಡಿದ್ಧಾರೆ.
ಸರ್ ಒಂದ್ ಕುರ್ಚಿನಾದ್ರೂ ಹಾಕ್ಸಿ ಪ್ಲೀಸ್.. ಬೆಳಗಾವಿ ಅಧಿವೇಶನದಲ್ಲಿ ಸಚಿವರು, ಶಾಸಕರ OSD, PAಗಳ ಅಳಲು!
RELATED ARTICLES