Top Newsವೈರಲ್ ನ್ಯೂಸ್ಸಿನಿಮಾ

ಮದುವೆಯಾಗಲು ‘ವರ್ಜಿನ್ ಹುಡುಗಿ’ ಸಿಗೋದು ಕಷ್ಟ ಎಂದ ನೆಟ್ಟಿಗನಿಗೆ : ಗಾಯಕಿ ಚಿನ್ಮಯಿ ಕಿಡಿ

ಭಾರತೀಯ ಪುರುಷರಿಗೆ ಮದುವೆಯಾಗಲು ‘ವರ್ಜಿನ್ ಹುಡುಗಿಯರು’ ಸಿಗುವುದಿಲ್ಲ ಎಂದು ಹೇಳಿದ ಟ್ವಿಟರ್ ಬಳಕೆದಾರರೊಬ್ಬರನ್ನು ಗಾಯಕಿ ಚಿನ್ಮಯಿ ಶ್ರೀಪಾದ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಜಿನ್ ಎನ್ನುವುದು ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆಯೇ? ಪುರುಷರಿಗೂ ಇದು ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಚಿನ್ಮಯಿ ಶ್ರೀಪಾದ ಅವರು ಅದ್ಬುತ ಗಾಯಕಿ ಆಗಿದ್ದಾರೆ. ತಮ್ಮ ಹಾಡುಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದ್ರೆ ಕೆಲವು ವರ್ಷಗಳಿಂದ ಆಕೆಯ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುತ್ತಿದೆ. ಸಮಾಜದಲ್ಲಿ ಆಗುತ್ತಿರುವ ಹಲವು ಸಮಸ್ಯೆಗಳಿಗೆ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯಿಸೋ ಚಿನ್ಮಯಿ ಶ್ರೀಪಾದ ಅವರ ಕಮೆಂಟ್‌ ಗಳು ತೀವ್ರ ಟೀಕೆಗೆ ಕಾರಣವಾಗಿದ್ದವು.

ಹೊಸ ವರ್ಷದ ಸಂದರ್ಭದಲ್ಲಿ ಚಿನ್ಮಯಿ ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. Blinkit ಡೆಲಿವರಿ ಆ್ಯಪ್‌ ನ CEO ಅವರು ತಮ್ಮ X ಖಾತೆಯಲ್ಲಿ ಡಿಸೆಂಬರ್ 31 ರಂದು ಫುಡ್​ ಹಾಗೂ ವಿವಿಧ ವಸ್ತುಗಳ ವಿತರಣೆಯ ಬಗ್ಗೆ ಪೋಸ್ಟ್ ಶೇರ್ ಮಾಡಿದ್ರು. ಆ ಒಂದೇ ದಿನ 20 ಸಾವಿರ ಕಾಂಡೋಮ್ ಮಾರಾಟವಾಗಿದೆ. ಇದಕ್ಕೆ ನೆಟ್ಟಿಗರು ಕೂಡ ಕಾಮಿಡಿ ಆಗಿಯೇ ಪ್ರತಿಕ್ರಿಯಿಸಿದ್ರು. ಯಾವ ಫ್ಲೇವರ್‌ ಗಳು ಹೆಚ್ಚು ಮಾರಾಟವಾಗಿವೆ ಎಂದು ಕೇಳುವ ಮೂಲಕ ಚಾಟ್ ಶುರು ಮಾಡಿದ್ರು. ಇದಕ್ಕೆ ಉತ್ತರಿಸಿದ ಸಿಇಒ ಚಾಕೊಲೇಟ್ ಮತ್ತು ಸ್ಟ್ರಾಬೆರಿ ಫ್ಲೇವರ್‌ಗಳು ಹೆಚ್ಚು ಮಾರಾಟವಾಗಿವೆ ಎಂದು ಮತ್ತೊಂದು ಪೋಸ್ಟ್ ಮಾಡಿದ್ರು.

ಈಗ ಡಿಲೀಟ್ ಮಾಡಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಚಿನ್ಮಯಿ, ‘ಹಾಗಾದರೆ ಪುರುಷರು ಮಹಿಳೆಯರೊಂದಿಗೆ ವಿವಾಹಪೂರ್ವ ಸಂಭೋಗವನ್ನು ಹೊಂದಿರಬಾರದು’. ಯಾರಾದರೂ ವಿವಾಹಪೂರ್ವ ಲೈಂಗಿಕತೆಯ ವಿರುದ್ಧ ಕಠಿಣ ದೃಷ್ಟಿಕೋನಗಳನ್ನು ಹೊಂದಿದ್ದರೆ, ಅವರು ಆ ಮಾನದಂಡಗಳನ್ನು ಸಾರ್ವತ್ರಿಕವಾಗಿ ಅನ್ವಯಿಸಬೇಕು ಎಂದಿದ್ದಾರೆ.

ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಚಿನ್ಮಯಿ ಅವರ ಅಭಿಪ್ರಾಯಕ್ಕೆ ‘ವಿದೂಷಕ’ ಎಂದು ಕರೆದು, ಮಹಿಳೆಯರೂ ಸಹ ಮಾಡಬಾರದು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಗಾಯಕಿ, ‘ಮಹಿಳೆಯರು ‘VIRRRRRGIN’ ಗೀಳು ಹೊಂದಿರುವವರಲ್ಲ. ಹೇಗಾದರೂ ಸರಿ ಪುರುಷರು ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ ಎಂದು ಭಾವಿಸುತ್ತಾರೆ ಮತ್ತು ನೀವೆಲ್ಲರೂ ಸುರಕ್ಷಿತ ಅಥವಾ ಅಸುರಕ್ಷಿತ ಲೈಂಗಿಕತೆಯನ್ನು ಹೊಂದಿದ್ದೀರಾ ಎಂದು ಕೇಳಲು ಸಹ ಮಹಿಳೆಯರು ಧೈರ್ಯ ಮಾಡುವುದಿಲ್ಲ’ ಎಂದಿದ್ದಾರೆ.

ಗಾಯಕಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಬೆಂಬಲ ವ್ಯಕ್ತವಾಗಿದೆ. ಅವರಲ್ಲಿ ಹಲವರು ಮೂಲ ಟ್ವೀಟ್ ಅನ್ನು ಟೀಕಿಸಿದ್ದಾರೆ. ಈ ಹಿಂದೆ ಆನ್‌ಲೈನ್‌ನಲ್ಲಿ ತಮ್ಮ ವಿರುದ್ಧ ಉಂಟಾದ ಟೀಕೆಗಳಿಂದಾಗಿ ತನ್ನ ಟ್ವೀಟ್‌ಗಳಿಗೆ ಪ್ರತ್ಯುತ್ತರ ನೀಡುವುದನ್ನು ನಿರ್ಬಂಧಿಸಿದ್ದಾರೆ.

Comments (0)

Your email address will not be published. Required fields are marked *

Back to top button