
ಬೆಂಗಳೂರು: ಮನುಷ್ಯರ ಮಾನವಿಯತೆಯನ್ನೇ ದುರ್ಬಳಕೆ ಮಾಡಿಕೊಂಡು ಮೋಸ ಮಾಡುವ ಜಾಲವೊಂದು ಸಿಲಿಕಾನ್ ಸಿಟಿಯಲ್ಲಿ ಸದ್ದು ಮಾಡ್ತಿರುವ ಗ್ಯಾಂಗ್ ಒಂದು ನಗರದಲ್ಲಿ ತಲೆ ಎತ್ತಿದೆ. ಅಮಾಯಕರ ವೇಷಧರಿಸಿ ಅಯ್ಯೋಪಾಪ ಅನ್ನುವಷ್ಟರ ಮಟ್ಟಿಗೆ ಡ್ರಾಮಾ ಮಾಡಿ, ಅಣ್ಣಾ, ಮೇಡಂ ಸಹಾಯ ಮಾಡಿ ಅಂತ ವಂಚಿಸಿ ಕ್ಷಣಾರ್ಧದಲ್ಲಿ ಪರಾರಿಯಾಗುವವರು ಸಿಟಿಯಲ್ಲಿದ್ದಾರೆ, ಮೋಸ ಹೋಗುವ ಜನರೇ ಮೋಸ ಹೋಗೋಕ್ಕೂ ಮುನ್ನ ಎಚ್ಚರವಹಿಸಿ.

ಮುಖ್ಯವಾಗಿ ಅಂಗಡಿ ವ್ಯಾಪಾರ, ಸೈಬರ್ ಗಳಲ್ಲಿ ಕಮಿಷನ್ ಆಸೆಗೆ ಕ್ಯಾಶ್ ಕೊಡುವವರೆ ಇವರ ಟಾರ್ಗೆಟ್. ಅಣ್ಣ ಮೆಡಿಕಲ್ ಎಮರ್ಜೆನ್ಸಿ ಇದೆ ಪೋನ್ ಪೇ ಮಾಡ್ತಿನಿ, ನನಗೆ ಕ್ಯಾಶ್ ಕೊಡಿ ಅಂತ ನಟಿಸಿ ಅಂಗಡಿಯರಿಗೆ ಉಂಡೆನಾಮ ಹಾಕಿ ಪರಾರಿಯಾಗಿರುವ ಘಟನೆ, ಆಂಧ್ರಹಳ್ಳಿಯ ಸೈಬರ್ ಸೆಂಟರ್ ನಲ್ಲಿ ನಡೆದಿದೆ.
ಸಾರ್ ಕ್ಯಾಶ್ ಕೊಡಿ ಅಕೌಂಟ್ ಗೆ ಹಾಕ್ತೇನೆ ಅಂತಾರೆ. ಸ್ವಲ್ಪ ಮೆಡಿಕಲ್ ಎಮರ್ಜೆನ್ಸಿ ಇದೆ 10,000 ಸಾವಿರ ಕೊಡಿ ಅಂತಾರೆ ಅಷ್ಟಿಲ್ಲ ಅಂದ್ರೆ, 5,000 ಸಾವಿರ ಆದ್ರೂ ಕೊಡಿ ಅಂತ ರಿಕ್ವೆಸ್ಟ್ ಮಾಡ್ತಾರೆ. ಇಂತವ್ರ ಮಾತಿಗೆ ಮರುಳಾಗಿ ಸ್ಕ್ಯಾನರ್ ಗೆ ಹಾಕು ಅಂತ ಹೇಳಿದರೆ ಸ್ಕ್ಯಾನ್ ಮಾಡಿ ಕೋಡಲೇ ನೆಟ್ ಆಫ್ ಮಾಡುತ್ತಾರೆ. ಬಳಿಕ ಸ್ಕ್ಯಾನರ್ ವರ್ಕ್ ಆಗ್ತಿಲ್ಲ ಮೊಬೈಲ್ ನಂಬರ್ ಗೆ ಹಾಕ್ತೀನಿ ಅಂತ ಹೇಳ್ತಾನೆ.
ಫೇಕ್ ಆ್ಯಪ್ ಮುಖಾಂತರ, ಅಥವಾ ಕೆಲವರು ಸ್ಕ್ರೀನ್ ಶಾಟ್ ತೋರಿಸಿ ಪೇಮೆಂಟ್ ಸಕ್ಸಸ್ ಅನ್ನುವ ಸ್ಕ್ರೀನ್ ತೋರಿಸಿ ಹಣ ಪಡೆದು ಎಸ್ಕೇಪ್ ಆಗ್ತಾರೆ. ನಂತರ ನೀವು ಬ್ಯಾಲೇನ್ಸ್ ಚೆಕ್ ಮಾಡಿದಾಗ ಖಾತೆಗೆ ಹಣವೇ ಬಂದಿರಲ್ಲ. ಆಂದ್ರಹಳ್ಳಿಯ ತಿಗಳರಪಾಳ್ಯದ ಸೈಬರ್ ಸೆಂಟರ್ ಮಾಲೀಕನ ಬಳಿ 10 ಸಾವಿರ ಪಡೆದುಕೊಂಡು ಎಸ್ಕೇಪ್ ಆಗಿದ್ದಾನೆ. ಇದೊಂದೇ ಘಟನೆಯಲ್ಲ ಇಂತಹ ಹಲವು ಘಟನೆಗಳು ನಗರದಲ್ಲಿ ನಡೆದಿವೆ.




