ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿರುವ ಯತ್ನಾಳ್, ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಪಕ್ಷವಾಗಿದೆ, ಹಿಂದೂಗಳ ಪರವಾಗಿ ಎಂದೂ ಮಾತಾಡಿಲ್ಲ. ನೆಹರುನಿಂದ ಹಿಡಿದು ಈಗಿನ ಕಾಂಗ್ರೆಸ್‌ನವರೆಗೂ ಯಾರೊಬ್ಬರು ಹಿಂದೂ ಪರ ಧ್ವನಿ ಎತ್ತಿಲ್ಲ. ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ ಇದ್ದಂಗೆ. ಸಿದ್ದರಾಮಯ್ಯ ಎಂದಿಗೂ ಹಿಂದೂಗಳ ಪರ ನಿಂತ್ತಿಲ್ಲ, ಮಾತಾಡಿಲ್ಲ. ಪಾಕಿಸ್ತಾನದ ಪರ ಒಲವು ತೋರಿಸುತ್ತಿದ್ದಾರೆ. ಬೇಕಿದ್ರೇ ಅವರು ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿ ಆಗಲಿ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಹೆಚ್ಚು ಪ್ರಚಾರದಲ್ಲಿದ್ದಾರೆ. ಅಲ್ಲಿನ ಪ್ರಧಾನಿಗಿಂತಲ್ಲೂ ಸಿದ್ದರಾಮಯ್ಯ ಹೆಚ್ಚು ಪ್ರಚಾರದಲ್ಲಿದ್ದಾರೆ. ಹಣೆಹೆ ಕುಂಕುಮ ಭಂಡಾರ ಹಚ್ಚಿದ್ದನ್ನ ಒರೆಸಿಕೊಳ್ಳುವವರಿಂದ ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ ಅಂತಾ ವ್ಯಂಗ್ಯವಾಡಿದ್ರು.
ರಾಜ್ಯದ ವಿಚಾರದಲ್ಲಿ ರಕ್ಷಣೆ ಕಾನೂನು ಸುವ್ಯವಸ್ಥೆ ಸರಿ ಮಾಡಲಾಗದ ಸಿಎಂ, ಕೇಂದ್ರದ ಭದ್ರತಾ ವೈಫಲ್ಯ ಬಗ್ಗೆ ಮಾತಾಡ್ತಾರೆ. ನರೇಂದ್ರ ಮೋದಿ ಬಗ್ಗೆ ಮಾತಾಡೋ ನೈತಿಕತೆ ಕಾಂಗ್ರೆಸಗಿಲ್ಲ. ನೆಹರು ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಪಾಕಿಸ್ತಾನ ಒಡೆದು ಕೊಡಲಾಯಿತು. ದೇಶ ವಿಭಜನೆ ಸಂದರ್ಭದಲ್ಲಿ ಭಾರತದಿಂದ ಮುಸ್ಲಿಮರು ಯಾರು ಹೋಗಬೇಡಿ ಎಂದು ಗಾಂಧೀಜಿಯವರು ಹೇಳಿದರು. 1942ರಲ್ಲಿಯೇ ಅಂಬೇಡ್ಕರವರು ಭಾರತದಲ್ಲಿರುವ ಮುಸ್ಲಿಮರೆಲ್ಲರು ಪಾಕಿಸ್ತಾನಕ್ಕೆ ಹೋಗಬೇಕು ಅಂದಿದ್ರು. ಪಾಕಿಸ್ತಾನದಲ್ಲಿರುವ ಎಲ್ಲಾ ಹಿಂದೂಗಳು ಭಾರತಕ್ಕೆ ಬರುವಂತೆ ಹೇಳಿದ್ರು. ದೇಶದಲ್ಲಿ ಎಲ್ಲಿಯವರೆಗೆ ಮುಸ್ಲಿಮರು ಇರುತ್ತಾರೋ, ಅಲ್ಲಿಯವರೆಗೆ ಅಶಾಂತಿ ಇರುತ್ತದೆ ಅಂತಾ ಅಂಬೇಡ್ಕರ್ ಎಂದಿದ್ದರು. ಅಂದು ಅಂಬೇಡ್ಕರ್ ಮಾತನ್ನು ನೆಹರು, ಗಾಂಧೀಜಿ ಕೇಳಲಿಲ್ಲ. ನೆಹರು ಅವರ ಮನಸ್ಸು ಬಹುತೇಕ ಪಾಕಿಸ್ತಾನ ಕಡೆ ಇತ್ತು. ನೆಹರು ಕಾಶ್ಮೀರಕ್ಕೆ 370 ನೀಡಿದ್ದು ಏಕೆ?. ದೇಶದಲ್ಲಿ ಕೋಮು ಸಂಘರ್ಷಕ್ಕೆ ನೆಹರು ಅವರೇ ಮುಖ್ಯ ಕಾರಣ ಅಂತಾ ಯತ್ನಾಳ್ ಹೇಳಿದ್ರು.
ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲಿ ಅಂತಾ ಸಚಿವ ಸಂತೋಷ್ ಲಾಡ್ ಹೇಳುತ್ತಾರೆ. ನರೇಂದ್ರ ಮೋದಿಯವರ ಮುಂದೆ ಲಾಡ್ ಬಚ್ಚಾ. ಲಾಡ್ ತಮ್ಮ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೀಗೆ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೇ ಲಾಡ್ ಸೋಲುತ್ತಿದ್ದರು. ಬಿಜೆಪಿಯವರ ಅಡ್ಜೆಸ್ಟಮೆಂಟ್‌ನಿಂದ ಗೆದಿದ್ದಾರಷ್ಟೆ. ಪಹಲ್ಗಾಂನಲ್ಲಿ ಉಗ್ರರು ಧರ್ಮ ಕೇಳಿ ದಾಳಿ ನಡೆಸಿಲ್ಲ ಅಂತಾ ಸಚಿವ ಅರ್.ಬಿ. ತಿಮ್ಮಾಪುರ ಹೇಳ್ತಾರೆ. ಉಗ್ರರ ದಾಳಿ ವೇಳೆ ಈ ತಿಮ್ಮಾಪುರ ಅಲ್ಲಿ ಹೋಗಿದ್ದರಾ?. ಉಗ್ರರ ಪಕ್ಕದಲ್ಲೇ ತಿಮ್ಮಾಪುರ ನಿಂತಿರಬೇಕು. ಉಗ್ರರು ನಾವು ಧರ್ಮ ಕೇಳಿಲ್ಲ ಅಂತಾ ತಿಮ್ಮಾಪುರ ಅವರಿಗೆ ಹೇಳಿರಬೇಕು ಅಂತಾ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದ್ದಾರೆ.