Top Newsರಾಜಕೀಯರಾಜ್ಯಸುದ್ದಿ

ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಸಿಎಂ; ಸಂಸದ ಗೋವಿಂದ ಕಾರಜೋಳ

ಬೀದರ್: ರಾಜ್ಯ ಕಾಂಗ್ರೆಸ್ ನಲ್ಲಿ ಯಾರೇ ತಿಪ್ಪರಲಾಗ ಹಾಕಿದರು ಕೂಡ ಸಿಎಂ ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಸಿಎಂ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರಾಯೇ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ಅಷ್ಟರೋಳಗೆ ವಿಧಾನಸಭೆ ಚುನಾವಣೆ ಬರಬಹುದು ಕಾದು ನೋಡಿ ಎಂದರು. ಡಿಕೆಶಿ ಜ್ಯೋತಿಷ್ಯ ನಂಬ್ತಾರೆ. ನೀವು ಸಿಎಂ ಆಗ್ತೀರಿ ಅಂತ ಅವರಿಗ್ಯಾರೋ ಜ್ಯೋತಿಷಿಗಳು ಹೇಳಿರಬಹುದು ಎಂದು ವ್ಯಂಗವಾಡಿದರು. ಈ ಹಿಂದೆ ದೇವರಾಜ್ ಅರಸ್ ಹಾಗೂ ವಿರೇಂದ್ರ ಪಾಟೀಲ್ ರಿಗೆ ಆಗಿದ್ದ ಸ್ಥಿತಿ ಡಿಕೆ ಶಿವಕುಮಾರ್ ಅವರಿಗೂ ಕೂಡ ಆಗುತ್ತೆ ಎಂದರು. ರಾಜ್ಯ ವಿಧಾನಸಭೆಗೆ ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಗೆ 20 ಸೀಟುಗಳು ಕೂಡ ಬರುವುದಿಲ್ಲ. ಲೋಕಸಭೆಗೆ ಚುನಾವಣೆ ನಡೆದರೆ 40 ಸೀಟುಗಳು ಸಹ ಕಾಂಗ್ರೆಸ್​ ಗೆ ಬರುವುದಿಲ್ಲ ಎಂದರು. ಮುಂದುವರೆದು ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಲ್ಲಿ ಯಾರೇ ತಿಪ್ಪರಲಾಗ ಹಾಕಿದರು ಸಹ ಸಿಎಂ ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ನ ಕೊನೆಯ ಸಿಎಂ ಎಂದು ಗೋವಿಂದ ಕಾರಜೋಳ ಹೇಳಿದರು.

Comments (0)

Your email address will not be published. Required fields are marked *

Back to top button