ಬೆಂಗಳೂರು : ಸಿದ್ದರಾಮಯ್ಯ ಅವರೇ ಕಾಂತರಾಜು ವರದಿ ಎಲ್ಲಿದೆ..? ಸರ್ಕಾರದ ತಿಜೋರಿಯಲ್ಲಿದ್ದ ವರದಿ ಕದ್ದವರು ಯಾರು..? ಮೊದಲು ಬಹಿರಂಗಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಟ್ವೀಟಾಸ್ತ್ರ ಮಾಡಿದ ಜೆಡಿಎಸ್.
ರಾಜ್ಯದಲ್ಲಿ ಕಿಚ್ಚು ಹೊತ್ತಿಸಿದ ಜಾತಿ ಜನಗಣತಿ. ಸಿದ್ದರಾಮಯ್ಯ ವಿರುದ್ದ ಕಿಡಿಕಾರುತ್ತಿರುವ ಜೆಡಿಎಸ್ ನಾಯಕರು.ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದ ಜೆಡಿಎಸ್.
ರಾಜ್ಯದಲ್ಲಿ ಜಾತಿ ಗಣತಿಯ ಕಿಚ್ಚು ಹಚ್ಚಿರುವ ಜಾತಿವ್ಯಾದಿ ಸಿದ್ದರಾಮಯ್ಯ ಅವರೇ, ಕಳೆದು ಹೋಗಿರುವ ಕಾಂತರಾಜು ವರದಿಯ ಮೂಲಪ್ರತಿ ಎಲ್ಲಿದೆ ? ಮೊದಲು ಬಹಿರಂಗ ಪಡಿಸಿ ಎಂದು ಟ್ಟೀಟ್ ಮೂಲಕ ವಾಗ್ದಾಳಿ ಮಾಡಿದ ಜೆಡಿಎಸ್.
ಸರ್ಕಾರದ ತಿಜೋರಿಯಲ್ಲಿದ್ದ ಕಾಂತರಾಜು ವರದಿಯ ಮೂಲಪ್ರತಿಯನ್ನು ಕದ್ದವರು ಯಾರು ? ಇದರಲ್ಲಿ “ಸಿದ್ದಹಸ್ತ”ನ ಕೈವಾಡ ಅಡಗಿದಯೇ ? ಎಂದು ಪ್ರಶ್ನೆ ಮಾಡಿದ್ದಾರೆ.
ಮೂಲ ಜಾತಿ ಗಣತಿ ವರದಿಯಲ್ಲಿ ಅಂಕಿ-ಅಂಶಗಳು ಏನಿತ್ತು ಎನ್ನುವುದು ಇನ್ನೂ ರಹಸ್ಯವಾಗೆ ಉಳಿದಿದೆ. ಸಿದ್ದರಾಮಯ್ಯ ಮತ್ತು ಪಟಾಲಂ ಸೃಷ್ಟಿಸಿರುವ ರೆಡಿಮೇಡ್ ವರದಿಯನ್ನು ಸಂಪುಟದ ಸಚಿವರು, ಶಾಸಕರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಒಡೆದು ಆಳುವುದು, ವಿಭಜಿಸುವುದು, ಸುಳ್ಳು ಹೇಳುವುದು ಪಕ್ಷದ DNA ಯಲ್ಲೇ ಅಡಗಿದೆ. ಸಿದ್ದರಾಮಯ್ಯ ಕೃಪಾಪೋಷಿತ ನಾಟಕ ಮಂಡಳಿ ಅಲುಗಾಡುತ್ತಿರುವ ಸಿಎಂ ಕುರ್ಚಿ ಉಳಿಸಿಕೊಳ್ಳಲು ಮಾಡುತ್ತಿರುವ ಸದಾರಮೆ ನಾಟಕವೇ ?